ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ಹಾಗೂ ವಕೀಲರ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ “ಮಾದಕ ವ್ಯಸನ ಹಾಗೂ ಸಿಗರೇಟ್ ಮತ್ತು ಉತ್ಪನ್ನಗಳ ಕಾಯಿದೆ” ಹಾಗೂ ವಿಶ್ವ ಭೂ ದಿನದ ಅಂಗವಾಗಿ ಒಂದು ದಿನದ ಕಾನೂನು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ದೀಪ ಬೆಳಗಿಸಿ ಉದ್ಘಾಟಿಸಿದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಮಾತನಾಡಿ ಹದಿಹರೆಯದಲ್ಲಿ ವ್ಯಸನಿಗಳಾಗುವುದು ಬಹಳ ಸುಲಭ. ಈ ಹಂತದಲ್ಲಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಿದಲ್ಲಿ ಜೀವನದಲ್ಲಿ ಬರುವ ಅನೇಕ ತೊಂದರೆಗಳನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ವಕೀಲರಾದ ಬಿ. ನರಸಿಂಹ ಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಸಾಮಜಿಕ ಅರಿವು ಜವಾಬ್ದಾರಿಯೂ ಇರಬೇಕು. ಮಾದಕ ದ್ರವ್ಯಗಳು ಅವುಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿ ನಾವೆಲ್ಲೂರು ಸಮಾಜವನ್ನು ಜಾಗೃತಗೊಳಿಸೋಣ ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಮುರಳೀಧರ್ ಯಸ್. ಸ್ವಾಗತಿಸಿದರು. ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾರಾಲೀಗಲ್ ವಾಲಂಟಿಯರ್, ಉಪನ್ಯಾಸಕಿ ಸಂಗೀತ ಕಾರ್ಯಕ್ರಮ ಸಂಯೋಜಿಸಿದರು. ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನೆಲ್ ವಕೀಲೆ ಪ್ರಮೀಳ, ಪ್ರೀಯ ಪಿ.ವಿ. ಉಪಸ್ಥಿತರಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಉಷಾಕಿರಣ್.ಎಸ್.ಎಂ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹಾಗೂ ಹಿರಿಯ ಉಪನ್ಯಾಸಕರು, ವಿದ್ಯಾಥಿಗಳು ಭಾಗವಹಿಸಿದರು.