ಪುತ್ತೂರು ಹೋಟೇಲ್ ಶ್ರೀ ಲಕ್ಷ್ಮೀ ಮಾಲಕ ದೇವಪ್ಪ ನೋಂಡರವರ ಶ್ರದ್ದಾಂಜಲಿ ಸಭೆ

0

ಸರಳ ಸಜ್ಜನಿಕೆಯ ವ್ಯಕ್ತಿ-ಮೋಹನ್ ರೈ
ಸ್ನೇಹ ಜೀವಿ- ಜಾನ್‌ಕುಟೀನೋ
ಉದ್ಯಮದ ಜೊತೆಗೆ ಸಮಾಜ ಸೇವೆ- ಸೀತಾರಾಮ ರೈ


ಪುತ್ತೂರು: ಪುತ್ತೂರು ಹೋಟೇಲ್ ಶ್ರೀ ಲಕ್ಷ್ಮೀ ಮಾಲಕ ದೇವಪ್ಪ ನೋಂಡರವರ ಉತ್ತರಕ್ರಿಯೆಯು ಏ. 20 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಕಾರ್‍ಯಕ್ರಮ ಜರಗಿತು.


ಸರಳ ಸಜ್ಜನಿಕೆಯ ವ್ಯಕ್ತಿ-ಮೋಹನ್ ರೈ
ಸಾಮಾಜಿಕ ಮುಂದಾಳು ಮೋಹನ್ ರೈ ನರಿಮೊಗರುರವರು ಮಾತನಾಡಿ ದೇವಪ್ಪ ನೋಂಡರವರು ಸಮಾಜದಲ್ಲಿ ಎಲ್ಲರೊಂದಿಗೆ ಅತ್ಮೀಯತೆಯಿಂದ ಬೆರೆತು ಬಾಳಿದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ತನ್ನ 14 ನೇ ವರುಷದಲ್ಲಿ ವೃತ್ತಿ ಜೀವನಕ್ಕೆ ಬಂದ ದೇವಪ್ಪ ನೋಂಡರವರು ಕಠಿಣ ಪರಿಶ್ರಮಿಯಾಗಿದ್ದು, ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ ಎಂದರು.


ಸ್ನೇಹ ಜೀವಿ- ಜಾನ್‌ಕುಟೀನೋ
ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಜಾನ್ ಕುಟೀನೋರವರು ಮಾತನಾಡಿ ದೇವಪ್ಪ ನೋಂಡರವರು ಸ್ನೇಹಜೀವಿಯಾಗಿದ್ದು, ಸಮಾಜದ ಎಲ್ಲರೊಂದಿಗೆ ಅನ್ಯೂನತೆಯಿಂದ ಬದುಕಿ ಬಾಳಿದ ವ್ಯಕ್ತಿಯಾಗಿದ್ದರು ಎಂದು ಹೇಳಿದರು


ಉದ್ಯಮದ ಜೊತೆಗೆ ಸಮಾಜ ಸೇವೆ- ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ 40 ವರ್ಷಗಳ ಹಿಂದೆ ಪುತ್ತೂರಿನ ನಮ್ಮ ಪ್ರಶಾಂತ್ ಹೋಟೆಲ್ ಉದ್ಯಮವನ್ನು ದೇವಪ್ಪ ನೋಂಡರವರು ಎಲ್ಲರೂ ಮೆಚ್ಚುವ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದರು, ಇದು ತುಂಬಾ ಸಂತೋಷ ತರುವ ವಿಷಯವಾಗಿದ್ದು, ದೇವಪ್ಪ ನೋಂಡರವರು ಬಳಿಕ ಸ್ವಂತ ಹೋಟೇಲ್ ಪ್ರಾರಂಭ ಮಾಡಿದರು, ಹೋಟೇಲ್ ಉದ್ಯಮದ ಜೊತೆಗೆ ಸಮಾಜ ಸೇವೆ, ಧಾರ್ಮಿಕ ಕಾರ್‍ಯದಲ್ಲಿ ಭಾಗಿಯಾಗಿ, ಸಮಾಜಕ್ಕೆ ಸದಾ ಕೊಡುಗೆ ನೀಡುತ್ತಿದ್ದರು ಎಂದು ಹೇಳಿದರು.


ಶಾಸಕ ಸಂಜೀವ ಮಠಂದೂರು, ಸ್ವಣ್ವೋದ್ಯಮಿ ಬಲರಾಮ್ ಆಚಾರ್ಯ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ,ಕ.ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಓಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ಸಂಘು ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಿಕೀಯ ಮುಖಂಡರುಗಳು ಹಾಗೂ ಹಿತೈಷಿಗಳು ಹಾಗೂ ದೇವಪ್ಪ ನೋಂಡರವರ ಪತ್ನಿ ನಾಗವೇಣಿ ಡಿ.ನೋಂಡ, ಮಕ್ಕಳಾದ ಪ್ರವೀಣ್ ನೋಂಡ, ಸುಧೀರ್ ನೋಂಡ, ಪ್ರಮಿತ್ ನೋಂಡ, ಸೊಸೆಯಂದಿರಾದ ಮಾನಸ ಪ್ರವೀಣ್, ಶ್ವೇತಾ ಸುಧೀರ್, ಮೊಮ್ಮಕ್ಕಳು, ತಿರುವಾಜೆ ಕುಟುಂಬಸ್ಥರು, ಬಂಧು ಮಿತ್ರರು ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here