ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

0

ಪುತ್ತೂರು : ನರೇಂದ್ರ ಪದವಿಪೂರ್ವ ಕಾಲೇಜಿನ 20 ಬಡ ವಿದ್ಯಾರ್ಥಿಗಳಿಗೆ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ವತಿಯಿಂದ ತಲಾ ರೂ 5000 ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಎಂ ಸಿ ಆರ್ ಟಿ ನ ಅಧ್ಯಕ್ಷರಾದ ನಿಹಾಲ್ ಶೆಟ್ಟಿ, ಉಪಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ , ಖಜಾಂಚಿ ಯಾಗಿರುವ ಆಶ್ರಯ್ ಭಂಡಾರಿ,ಕಾರ್‍ಯದರ್ಶಿಗಳಾದ ಕಿರಣ್, ಹಾಗೂ ಎಂ ಸಿ ಆರ್ ಟಿ ನ ಟೇಬಲರ್ ಆದ ಪುತ್ತೂರಿನ ಸ್ವರ್ಣೋದ್ಯಮಿಯಾಗಿರುವ ಸುಧನ್ವ ಆಚಾರ್ಯರವರು ರೂ 1,33,000 ದ ಚೆಕ್ಕನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿಯಾಗಿರುವ ಅಚ್ಯುತ ನಾಯಕ್ ರವರಿಗೆ ಹಸ್ತಾಂತರಿಸಿದರು .

ಈ ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ,ಸಂಚಾಲಕರಾದ ಸಂತೋಷ ಬಿ.,ಸದಸ್ಯರಾದ ಸಂಪತ್ ಕುಮಾರ್ , ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್,ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here