ಪುತ್ತೂರು: ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.23ರಂದು ಬೆಳಿಗ್ಗೆ ದೈವಗಳಿಗೆ ಹಗಲು ಕೋಲೋತ್ಸವ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರದಲ್ಲಿ ಸಂಕ್ರಮಣ ದಿನದ ಹೊರತು ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ನಡೆಯುತ್ತದೆ.ಏ.23ರಂದು ಮಧ್ಯಾಹ್ನ ಕೆಂಡದರ್ಶನ ಸೇವೆ, ಅಗ್ನಿ ಕಲ್ಲುರ್ಟಿ ಮತ್ತು ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ರಾತ್ರಿ ಕೆಂಡದರ್ಶನ ಸೇವೆ, ಅಗ್ನಿ ಕಲ್ಲುರ್ಟಿ ಮತ್ತು ಸ್ವಾಮಿ ಕೊರಗಜ್ಜ ದೈವಕ್ಕೆ ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಸಂಕ್ರಮಣದ ದಿನ ಹೊರತುಪಡಿಸಿ ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿ ಸೋಮವಾರ, ಮಂಗಳವಾರ,ಶುಕ್ರವಾರ, ಶನಿವಾರ ಪ್ರಶ್ನಾ ಚಿಂತನೆ, ಬುಧವಾರ ಮತ್ತು ಗುರುವಾರ ಸೂಚಿತ ಪರಿಹಾರ ಕಾರ್ಯಗಳು ನಡೆಯುತ್ತದೆ ಎಂದು ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.