ಪುತ್ತೂರು: ಬನ್ನೂರು ನಿವಾಸಿ ಶಹಾನ ಬಾನುರವರು ಬ್ರೈಡಲ್ ಮೇಕಪ್ ಸ್ವರ್ಧೆಯಲ್ಲಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದಿದ್ದಾರೆ. ಮಾ.23ರಂದು ಮುಸ್ಲಿಂ ಬ್ರೈಡಲ್ ಮೇಕಪ್ನ್ನು 13 ನಿಮಿಷ 9 ಸೆಕೆಂಡ್ಗಳಲ್ಲಿ ಇವರು ಪೂರ್ಣಗೊಳಿಸಿದ್ದರು. ಬನ್ನೂರು ನಿವಾಸಿ ಮಹಮ್ಮದ್ ರಫೀಕ್ ಹಾಗೂ ಸಾಹಿರಾ ಬಾನು ದಂಪತಿಯ ಪುತ್ರಿಯಾದ ಇವರು ಬನ್ನೂರು ನಿವಾಸಿ ಸಯ್ಯದ್ ಅಬ್ದುಲ್ ರಿಯಾಜ್ ರವರ ಪತ್ನಿಯಾಗಿದ್ದಾರೆ. ಶಹನಾ ಬಾನು ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.