ಪುತ್ತೂರು: ಪಕ್ಷೇತರ ಅಭ್ಯರ್ಥಿಯಾದ ನನ್ನ ಪರವಾಗಿ ಮತದಾರ ಪ್ರಭು ಇದ್ದಾರೆಂದು ಈಗಾಗಲೇ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ಪ್ರಚಾರದ ವಾಹನ ನಿಲ್ಲಿಸುವ ಸೇರಿದಂತೆ ಇನ್ನಿತರ ವಿದ್ಯಾಮಾನಗಳ ನಡುವೆ ರಾಷ್ಟ್ರೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಯ ವಿರುದ್ಧ ಷಡ್ಯಂತ್ರ ಮಾಡುತ್ತಿದೆ. ಆದರೆ ಇದಕ್ಕೆಲ್ಲ ನಮ್ಮ ಕಾರ್ಯಕರ್ತರು ಸಂಘರ್ಷಕ್ಕೂ, ಪ್ರತಿರೋಧಕ್ಕೂ ಯಾವುದೇ ರೀತಿಯ ಉತ್ತರ ಕೊಡುವ ಕೆಲಸ ಮಾಡಬೇಡಿ ಎಂದು ಅರುಣ್ ಕುಮಾರ್ ಪುತ್ತಿಲ ಮನವಿ ಮಾಡಿದ್ದಾರೆ.
ಕಾರ್ಯಕರ್ತರ ಮೇಲೆ ಹಲ್ಲೆ, ಪ್ರಚಾರದ ವಾಹನ ನಿಲ್ಲಿಸುವ ಕೆಲಸ ಮಾಡುವುದನ್ನು ಈಗಾಗಲೇ ಗಮನಿಸಿದ್ದೇವೆ. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಎಲ್ಲರು ಸಯ್ಯಮದಿಂದ ಇರಬೇಕು. ಮೇ 10ಕ್ಕೆ ಚುನಾವಣೆ ಮುಗಿಯುವ ತನಕ ಯಾವುದೇ ರೀತಿ ಸಂಘರ್ಷಕ್ಕೆ ಪ್ರತಿರೋಧಕ್ಕೂ ಯಾವುದೇ ರೀತಿಯ ಉತ್ತರ ಕೊಡುವ ಕೆಲಸ ಮಾಡಬಾರದು. ಈ ಭಾರಿಯ ಚುನಾವಣೆಯಲ್ಲಿ ಗೆಲುವು ನಮ್ಮದೇ ಆಗಿದೆ. ಈ ಹಿನ್ನೆಲೆಯಿಂದ ಕಾರ್ಯಕರ್ತರು ಸಯ್ಯಮದಿಂದ ವರ್ತಿಸಬೇಕು. ಚುನಾವಣೆಯ ಎಲ್ಲಾ ಕೆಲಸ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ