ಆಲಂಕಾರು: ಬೈಕ್ ಪಲ್ಟಿ, ಸಹಸವಾರೆಗೆ ಗಾಯ

0

ಕಡಬ: ಬೈಕ್ ಪಲ್ಟಿಯಾದ ಪರಿಣಾಮ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಬೈಕ್‌ನ ಹಿಂಬದಿ ಸವಾರೆ ಗಾಯಗೊಂಡು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೇ 22ರಂದು ಸಂಜೆ ಆಲಂಕಾರು-ಶರವೂರು ರಸ್ತೆಯ ಬುಡೇರಿಯಾ ಕ್ರಾಸ್‌ನಲ್ಲಿ ನಡೆದಿದೆ.

ಆಲಂಕಾರು ನಿವಾಸಿ ಜೋಶಿಕಾ ರೈ(19ವ.)ಗಾಯಗೊಂಡವರಾಗಿದ್ದಾರೆ. ಮೇ 22ರಂದು ಸಂಜೆ ಮೋಹನ್‌ದಾಸ್ ರೈ ಎಂಬವರು ಜೋಶಿಕಾ ರೈಯವರನ್ನು ಬೈಕ್(ಕೆಎ21 ವಿ1441)ನಲ್ಲಿ ಕುಳ್ಳಿರಿಸಿಕೊಂಡು ಕುದ್ಮಾರು ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದ ವೇಳೆ ಆಲಂಕಾರು ಗ್ರಾಮದ ಬುಡೇರಿಯಾ ಕ್ರಾಸ್ ಪಕ್ಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ಡಾಮಾರು ರಸ್ತೆಗೆ ಪಲ್ಟಿಯಾಗಿದೆ. ಘಟನೆಯಲ್ಲಿ ಸವಾರ ಮೋಹನದಾಸ ರೈಯವರು ಯಾವುದೇ ಗಾಯವಿಲ್ಲದೆ ಪಾರಾಗಿದ್ದು ಸಹ ಸವಾರರಾಗಿದ್ದ ಜೋಶಿಕಾ ರೈಯವರ ಬಲ ಹಾಗೂ ಎಡಕಾಲಿಗೆ ಗಾಯವಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಆಲಂಕಾರು ಕಲ್ಲೇರಿ ನಿವಾಸಿ ಕೆ.ಸುಧಾಕರ ಪೂಜಾರಿಯವರು ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here