ಪುತ್ತೂರು: ಕುಡಿಪಾಡಿ ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ಜೂ.8 ರಂದು ನಡೆಯಿತು.
ಶಾಲಾ ನಾಯಕನಾಗಿ ಮನ್ವಿತ್ ಎಸ್.(ಸತೀಶ್ ಮತ್ತು ವಸುಂದರಾ ದಂಪತಿ ಪುತ್ರ), ಶಾಲಾ ಉಪನಾಯಕರಾಗಿ ಶಹಭಾಝ್ (ಅಬ್ದುಲ್ ರೆಹಮಾನ್ ಮತ್ತು ಕಮರುನ್ನಿಸ ದಂಪತಿ ಪುತ್ರ) ಆಯ್ಕೆಯಾಗಿದ್ದಾರೆ. ಉಳಿದಂತೆ ಗೃಹ ಸಚಿವರಾಗಿ ಶಮಿತ್, ಶ್ರೀರಕ್ಷನ್, ಶಿಕ್ಷಣ ಮಂತ್ರಿಯಾಗಿ ದೀಕ್ಷಾ, ಸ್ವಚ್ಚತಾ ಮಂತ್ರಿಯಾಗಿ ಗೀತಾ, ಕ್ರೀಡಾ ಮಂತ್ರಿಯಾಗಿ ಸಾಹಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಧನುಷಾ, ಆರೋಗ್ಯ ಮಂತ್ರಿಯಾಗಿ ಅಪ್ಫಾನ, ಪೂಜಾ, ತೋಟಗಾರಿಕಾ ಮಂತ್ರಿಯಾಗಿ ದೇವಿಪ್ರಸಾದ್, ನೀರಾವರಿ ಮಂತ್ರಿಯಾಗಿ ಧನ್ವಿತ್, ಆಹಾರ ಮಂತ್ರಿಯಾಗಿ ಸ್ವಪೂರ, ಗ್ರಂಥಾಲಯ ಮಂತ್ರಿಯಾಗಿ ಗೌತಮಿ, ವಿರೋಧ ಪಕ್ಷದ ನಾಯಕಿಯಾಗಿ ಧನುಷಾ ಎಂ. ಆಯ್ಕೆಯಾದರು.
ಶಾಲಾ ಮುಖ್ಯಗುರು ಚಂದ್ರಪ್ರಭಾರವರು ಪ್ರಮಾಣವಚನ ಬೋಧಿಸಿದರು. ಸಹ ಶಿಕ್ಷಕ ಲಿಂಗರಾಜ ಎಸ್.ಸಿ. ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು.