ಪುತೂರು ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ನವೀಕರಣ !ದಿನದಲ್ಲಿ 40 ಮಂದಿಗೆ ಮಾತ್ರ ಟೋಕನ್ – ನೂರಾರು ಮಂದಿ ವಾಪಾಸ್

0

ಪುತ್ತೂರು: ಭಾರತ ಸರ್ಕಾರವು ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್‌ಗಳನ್ನು 10 ವರ್ಷಗಳ ಹಿಂದೆ ನಿರ್ಮಿಸಿದ್ದರೆ ಅದನ್ನು ನವೀಕರಿಸಲು ಸೂಚಿಸಿದಂತೆ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸಲು ಪುತ್ತೂರಿನ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಪುತ್ತೂರಿನಲ್ಲಿ ಪ್ರಧಾನ ಅಂಚೆಕಚೇರಿಯಲ್ಲಿ ಮಾತ್ರ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ನೂರಾರು ಮಂದಿ ಸರದಿಯಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ.

ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ದಿನವೊಂದಕ್ಕೆ ನೂರಾರು ಮಂದಿ ಸರದಿಯಲ್ಲಿ ನಿಂತರೂ 40 ಮಂದಿಗೆ ಟೋಕನ್ ನೀಡಲಾಗುತ್ತಿದೆ. ಉಳಿದವರು ಹಿಂದಿರುಗುತ್ತಿದ್ದಾರೆ. ದೂರದ ಊರಿನಿಂದ ಬಂದವರು ಅಂಚೆ ಕಚೇರಿ ತಲುಪುತ್ತಿದ್ದಂತೆ ಟೋಕನ್ ಖಾಲಿ ಆಗಿರುತ್ತದೆ. ಇದರಿಂದ ದೂರದ ಊರಿನವರು ಇದರಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಅಂಚೆ ಕಚೇರಿಯಲ್ಲಿ ಹೆಚ್ಚುವರಿ ಟೋಕನ್ ಕೊಡುವ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಸಮಸ್ಯೆಯನ್ನು ಅರಿತ ಅಂಚೆ ಇಲಾಖೆ ಎರಡು ಕೌಂಟರ್ ಮಾಡುವ ಚಿಂತನೆ ಮಾಡಲಾಗಿದೆ. ಎರಡು ದಿನಗಳಲ್ಲಿ ಸಮಸ್ಯೆ ಸರಿ ಮಾಡಲಾಗುವುದು ಎಂದು ಅಂಚೆ ಇಲಾಖೆಯ ಮೂಲದಿಂದ ಮಾಹಿತಿ ಲಭ್ಯವಾಗಿದೆ.

ನಾನು ಮೂರು ದಿನದಿಂದ ಬರುತ್ತಿದ್ದೇನೆ:
ಆಧಾರ್ ಅಪ್‌ಡೇಟ್‌ಗಾಗಿ ಮೂರು ದಿನಗಳಿಂದ ಬರುತ್ತಿದ್ದೇನೆ. ಇಲ್ಲಿಗೆ ಬಂದಾಗ ಟೋಕನ್ ಮುಗಿದಿರುತ್ತದೆ. ಬೇರೆ ಅಂಚೆ ಕಚೇರಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದರೆ ಸುಲಭವಾಗುತ್ತಿತ್ತು ಎಂದು ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಚಂದ್ರಶೇಖರ್ ಆಳ್ವ ಅವರು ಹೇಳಿದ್ದಾರೆ.

ಸರಕಾರದ ಸೂಚನೆಯ ಪ್ರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳೊಗೊಂಡಂತೆ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಆಧಾರ್ ಸೇವೆಯನ್ನು ಸಾರ್ವಜನಿಕರಿಗೆ ನೀಡಬೇಕು. ಇದರಂತೆ ಪುತ್ತೂರಿನಲ್ಲಿ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಆಧಾರ್ ಸೇವೆಯನ್ನು ಒದಗಿಸಿದಲ್ಲಿ ಸಾರ್ವಜನಿಕರ ಆನಾನುಕೂಲತೆ ಖಂಡಿತ ದೂರವಾಗಲಿದೆ. ಆಧಾರ್ ಸೇವೆಯನ್ನು ಒದಗಿಸುವುದು ಅಂಚೆ ಕಚೇರಿಗಳ ಜವಾಬ್ದಾರಿ ಮಾತ್ರ ಅಂಥ ಸಾರ್ವಜನಿಕರು ತಿಳಿದುಕೊಂಡಿದ್ದರೆ ಅದು ತಪ್ಪು, ಪ್ರಸ್ತುತ ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ದಿನಂಪ್ರತಿ 40 ಟೋಕನ್ ನೀಡುತ್ತಿದ್ದು ಟೋಕಾನ್‌ನವರು ಮುಗಿದ ನಂತರ ಸಮಯಾವಕಾಶ ಇದ್ದಲ್ಲಿ ನಂತರನೂ ಜನರು ಕಾಯುತ್ತಿದ್ದರೆ ಅವರನ್ನು ಸಹ ಎಟೆಂಡ್ ಮಾಡಲಾಗುತ್ತಿದೆ. ಇತ್ತೀಚೆಗೆ ಪಾನ್ ಆಧಾರ್ ಲಿಂಕ್ ಖಡ್ಡಾಯ ಮತ್ತು ಸರಕಾರದ ಹಲವು ಹೊಸ ಯೋಜನೆಗಳಿಂದಾಗಿ ಆಧಾರ್ ತಿದ್ದುಪಡಿಗಾಗಿ ಆಧಾರ್ ಸೇವೆ ಒದಗಿಸುವಂತಹ ಪ್ರಧಾನ ಅಂಚೆ ಕಚೇರಿಯಲ್ಲಿ ಬರುವ ಜನರ ಸಂಖ್ಯೆ ಜಾಸ್ತಿಯಾಗಿರುತ್ತದೆ. ಆದ್ದರಿಂದ ಆದೇ ದಿನ ಒಂದೇ ಕಚೇರಿಯಲ್ಲಿ ಎಲ್ಲಾರನ್ನು ನಿಬಾಯಿಸುವುದು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲಾ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಆಧಾರ ಸೇವೆಯನ್ನು ಒದಗಿಸುವಲ್ಲಿ ಸಂಬಂಧಪಟ್ಟವರು ಕ್ರಮ ಕೈ ಗೊಂಡಲ್ಲಿ ಸಾರ್ವಜನಿಕರ ಅನಾನುಕೂಲತೆಯನ್ನು ನಿವಾರಣೆ ಮಾಡಬಹುದಾಗಿದೆ.
ತೀರ್ಥಪ್ರಸಾದ್ ಎಸ್,
ಪ್ರಧಾನ ಅಂಚೆ ಪಾಲಕರು, ಪುತ್ತೂರು ಪ್ರಧಾನ ಅಂಚೆ ಕಚೇರಿ,

LEAVE A REPLY

Please enter your comment!
Please enter your name here