ರಾಮಕುಂಜ ವಸತಿ ಶಾಲೆಯ ವಿಸ್ತೃತ ಕಟ್ಟಡ ಉದ್ಘಾಟನೆ – ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ವಸತಿನಿಲಯದ ಸ್ಥಾಪನಾ ವರ್ಷದ ವಿದ್ಯಾರ್ಥಿಗಳ ಸಮಾವೇಶ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯ ವಿಸ್ತೃತ ಕಟ್ಟಡದ ಉದ್ಘಾಟನೆ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಸತಿ ನಿಲಯದ ಸ್ಥಾಪನಾ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳ ಸಮಾವೇಶ ಜೂ.15ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.


ವಿಸ್ತೃತ ಕಟ್ಟಡದ ಉದ್ಘಾಟನೆ ನೆರವೇರಿಸಿ ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಸಮಾಜದ ಗೌರವಾನ್ವಿತ ಪ್ರಜೆಗಳಾಗಿ ಮುಂದೆ ದೇಶವನ್ನು ಮುನ್ನಡೆಸುತ್ತೇವೆ ಎಂಬ ಪ್ರತಿಜ್ಞೆ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು. ಈ ಹಿಂದೆ ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ಕಲಿತು ಈಗ ಉನ್ನತ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಇದಕ್ಕೆ ನಿದರ್ಶನರಾಗಿದ್ದಾರೆ. ಪ್ರತಿ ವರ್ಷವೂ ಇಲ್ಲಿ ಹಳೆವಿದ್ಯಾರ್ಥಿಗಳ ಸಮಾವೇಶ ನಡೆಸಬೇಕು. ಇದು ಹಳೆಯ ಬೇರಿನಿಂದ ಹೊಸ ಚಿಗುರು ಬೆಳೆಯಲು ಸಹಕಾರಿಯಾಗಲಿದೆ. ಕೃಷ್ಣೈಕ್ಯರಾಗಿರುವ ಶ್ರೀ ವಿಶ್ವೇಶತೀರ್ಥರು ಕೊಟ್ಟಿರುವ ಜವಾಬ್ದಾರಿಯನ್ನು ಆಡಳಿತ ಮಂಡಳಿಯವರು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ರಾಮಕೃಷ್ಣ ಶಿವಪ್ರಸಾದ್ ಆಳ್ವರವರು ಮಾತನಾಡಿ, ಪಿಯುಸಿ ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್ ಆಗಿದೆ. ಇಲ್ಲಿ ಯಶಸ್ವಿಯಾದಲ್ಲಿ ಮುಂದೆ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ರಾಮಕುಂಜದಲ್ಲಿ ಕಲಿಕೆಗೆ ಉತ್ತಮ ಪರಿಸರ, ವಾತಾವರಣವಿದೆ. ಉತ್ತಮ ಶಿಕ್ಷಕರ ತಂಡವಿದೆ. ಒಳ್ಳೆಯ ಸಂಸ್ಕೃತಿಯೂ ಸಿಗುತ್ತಿದೆ. ಇಂತಹ ವಾತಾವರಣದಲ್ಲಿ ಕಲಿಯುವುದರಿಂದ ಮುಂದೆ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯವಿದೆ. ಕೆ.ಸೇಸಪ್ಪ ರೈಯವರ ನೇತೃತ್ವದ ತಂಡ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ಬೆಳೆಸಿದೆ ಎಂದು ಹೇಳಿದರು. ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿಗಳಾದ ಹಾಸನ ತೋಟಗಾರಿಕೆ ಇಲಾಖೆಯ ಅನ್ಸಾರ್, ದೀಪಕ್ ರೈ ಸುಳ್ಯ, ಚಂದ್ರಕಾಂತ್ ಕಡಬ, ಕೌಶಿಕ್ ಶೆಟ್ಟಿ ಮೂಡಬಿದ್ರೆ, ಸಾಧಕ ವಿದ್ಯಾರ್ಥಿನಿ ಅಖಿಲಾ ಟಿ.,ಸಂದರ್ಭೊಚಿತವಾಗಿ ಮಾತನಾಡಿದರು.
ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಕೇಶವ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕ ಟಿ.ನಾರಾಯಣ ಭಟ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜನಾರ್ದನ ಬಿ.ಎಲ್., ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ಗಾಯತ್ರಿ ವಂದಿಸಿದರು. ಶಿಕ್ಷಕ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ಆಗಮಿಸಿದ್ದರು. ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್, ಶಾಲಾ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಸತಿ ನಿಲಯದ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ವಸತಿ ನಿಲಯದ ಹಿರಿಯ ವಿದ್ಯಾರ್ಥಿಗಳಾದ ಮಂಜುನಾಥ ಬಿ.ಕೆ.ಬನಶಂಕರಿ, ಡಾ.ಎಂ.ಎಸ್.ಪಣಕಟ್ ಕುಶಾಲನಗರ, ಸುರೇಶ್‌ಕುಮಾರ್ ಕಡಬ, ದೀಪಕ್ ಕೆ.ಎಸ್.ಮಡಿಕೇರಿ, ಆದಿತ್ಯಘಾಟೆ ಪುತ್ತೂರು, ಅಶೋಕ್‌ಕುಮಾರ್ ಕೋಡಿಂಬಾಳ, ಡಾ.ಶೈಲೇಶ್ ಸುಬ್ರಹ್ಮಣ್ಯ, ದೀಪಕ್ ರೈ ಸುಳ್ಯ, ಚಂದ್ರಕಾಂತ್ ಕಡಬ, ಅನ್ಸಾರ್ ಮೂಡಿಗೆರೆ, ರವಿರಾವ್ ಕಡಬ, ಕೌಶಿಕ್ ಶೆಟ್ಟಿ ಮೂಡಿಗೆರೆಯವರಿಗೆ ಗೌರವಾರ್ಪಣೆ ಮಾಡಲಾಯಿತು. ನಿಲಯ ಪಾಲಕರಾಗಿ ಈ ಹಿಂದೆ ಕೆಲಸ ನಿರ್ವಹಿಸಿದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ, ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ಬಿ.,ಅವರನ್ನು ಸನ್ಮಾನಿಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 500ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಗೌರವಿಸಿದರು. ಕೃಷ್ಣೈಕ್ಯರಾದ ಉಡುಪಿ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಧ್ಯಾನಕೇಂದ್ರದಲ್ಲಿ ಪೂಜೆ ಹಾಗೂ ಇತರೇ ಕೆಲಸ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳನ್ನೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಗೌರವಿಸಿದರು.

ಸನ್ಮಾನ:
ವಸತಿ ಶಾಲೆಯ ವಿಸ್ತೃತ ಕಟ್ಟಡದ ಕಾಮಗಾರಿ ನಿರ್ವಹಣೆ ಮಾಡಿದ ತಾಂತ್ರಿಕ ಮೇಲ್ವಿಚಾರಕ ಸುಬ್ರಹ್ಮಣ್ಯ, ವಿವಿಧ ಕೆಲಸ ನಿರ್ವಹಣೆ ಮಾಡಿದ ಲೋಕೇಶ್ ದೇವಾಡಿಗ, ದಿವಾಕರ, ಮೆಹತಾಜಿ ಮೆಂಡಲ್, ಪ್ರಶಾಂತ್ ರೈ ಮನವಳಿಕೆ, ಉಮೇಶ್, ಶ್ರೀಧರ ಹಾಗೂ ರುಕ್ಮಯ ಗೌಡ ಬಾರಿಂಜ ಅವರನ್ನು ಸ್ವಾಮೀಜಿ ಶಾಲು ಹಾಕಿ, ಫಲತಾಂಬೂಲ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here