ರಾಮಕುಂಜ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜ ಇಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಸಂಸತ್‌ನ ಮಂತ್ರಿ ಮಂಡಲವನ್ನು ಆಯ್ಕೆ ಮಾಡುವ ಸಲುವಾಗಿ ಮಕ್ಕಳಿಗೆ ಚುನಾವಣೆಯನ್ನು ನಡೆಸಲಾಯಿತು.

ಮೊಬೈಲ್‌ನ ಚುನಾವಣಾ ಆಪ್ ಬಳಸಿ ಮಕ್ಕಳಿಗೆ ಬ್ಯಾಲೆಟ್ ಮತ್ತು ಇ.ವಿ.ಎಂ ಗಳಲ್ಲಿ ಮತ ಚಲಾಯಿಸುವ ವಿಧಾನದ ಬಗ್ಗೆ ವಿವರಿಸಿ ನಂತರ ಮತ ಚಲಾಯಿಸುವ ಅವಕಾಶವನ್ನು ನೀಡಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಮಕ್ಕಳು ಬ್ಯಾಲೆಟ್ ಕೊಟ್ಟ ನಂತರ ತಮ್ಮ ಅಭ್ಯರ್ಥಿಗಳಿಗೆ ಮತವನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಉತ್ತಮ ದೇಶ ಕಟ್ಟುವ ಜವಾಬ್ದಾರಿ ಹೊಂದುವ ದೃಷ್ಟಿಯಿಂದ ಸಮಾಜದಲ್ಲಿನ ಪ್ರತಿಯೊಬ್ಬ ಪ್ರಜೆಗೂ ತಮಗಿಷ್ಟವಾದ ಅಭ್ಯರ್ಥಿಯನ್ನ ಆಯ್ಕೆ ಮಾಡುವ ಹೊಣೆಗಾರಿಕೆ ಇದೆ ಎಂಬುದನ್ನು ಮನವರಿಕೆ ಮಾಡಲಾಯಿತು. ಶಾಲೆಯ ನಾಯಕನಾಗಿ ಮಹಮ್ಮದ್ ಆಫ್ನಾನ್, ಉಪ ನಾಯಕಿಯಾಗಿ ಶಮ್‌ನಿಶಾ ಆಯ್ಕೆಯಾದರು. ಉಳಿದಂತೆ ಗೃಹ ಸಚಿವರಾಗಿ ಹಿಬಾಮರಿಯಮ್, ಶಿಕ್ಷಣ ಸಚಿವೆಯಾಗಿ ಝಲ್ಫಾ, ತೋಟಗಾರಿಕಾ ಸಚಿವನಾಗಿ ಮಹಮ್ಮದ್ ಆಫಿಲ್, ಕ್ರೀಡಾ ಸಚಿವನಾಗಿ ಮಹಮ್ಮದ್ ಖಲಂದರ್, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ಫಾತಿಮಾತ್ ಶೈಮ, ನೀರಾವರಿ ಮಂತ್ರಿಯಾಗಿ ಮೊಹಮ್ಮದ್ ಇನಾಝ್, ಸ್ವಚ್ಛತಾ ಮಂತ್ರಿಯಾಗಿ ಮಹಮ್ಮದ್ ಸುಹೈಲ್, ಸಾಂಸ್ಕೃತಿಕ ಮಂತ್ರಿಯಾಗಿ ಖುಬುರ ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷದ ನಾಯಕನಾಗಿ ಮೊಹಮ್ಮದ್ ಮತ್ತು ವಿರೋಧ ಪಕ್ಷದ ನಾಯಕಿಯಾಗಿ ಫಝೀಲಾ ಆಯ್ಕೆಯಾಗಿದ್ದಾರೆ. ಮಂತ್ರಿಮಂಡಲಕ್ಕೆ ಆಯ್ಕೆಯಾದ ಮಕ್ಕಳಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮಹೇಶ್‌ರವರು ಪ್ರಮಾಣವಚನ ಭೋಧಿಸಿದರು. ಸಭೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಝಕಾರಿಯ ಮತ್ತು ಸದಸ್ಯರು ಹಾಗೂ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.