ರಾಮಕುಂಜದ ಶ್ರೀ ಸಂಸ್ಕೃತ ಶಾಲೆಯಲ್ಲಿ ತಂಬಾಕು ವಿರೋಧಿ ಕಾರ್ಯ

0

ಪ್ರತಿ ಮನೆಯಲ್ಲೊ ದುಶ್ಚಟದ ವಿರುದ್ಧ ಜಾಗೃತಿ ಅಗತ್ಯ ಮಹೇಶ್ ಕೆ ಸವಣೂರು.

ಪುತ್ತೂರು: ತಂಬಾಕು ಸೇವನೆಯಿಂದ ನಮ್ಮ ಆರೋಗ್ಯದೊಂದಿಗೆ ಸಂಸಾರವು ಹಾಳಾಗುತ್ತದೆ. ಕೇವಲ ಕ್ಷಣಿಕ ಆಸೆಗೋಸ್ಕರ ಸುಂದರವಾದ ಜೀವನವನ್ನು ಹಾಳುಮಾಡಿಕೊಳ್ಳುವುದು ಸರಿಯಲ್ಲ, ಆದುದರಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲೂ ದುಶ್ಚಟದಿಂದ ಉಂಟಾಗುವ ಪರಿಣಾಮದ ಅರಿವು ಮೂಡಿಸಬೇಕು ಎಂದು ಕಡಬ ಜನ ಜಾಗೃತಿ ವೇದಿಕೆ ಅಧ್ಯಕ್ಷ, ವಕೀಲ ಮಹೇಶ್ ಕೆ ಸವಣೂರು ಎಂದರು‌.

ಅವರು ಜೂನ್ 18 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ, ಅಖಿಲ ಜನಜಾಗೃತಿ ವೇದಿಕೆ ಗೊಳಿತೊಟ್ಟು ವಲಯ, ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘ ಒಕ್ಕೂಟ ಇವುಗಳ ಆಶ್ರಯದಲ್ಲಿ ನಡೆದ ರಾಮಕುಂಜದ ಶ್ರೀ ಸಂಸ್ಕೃತ ಶಾಲೆಯ ಸಭಾಂಗಣದಲ್ಲಿ ನಡೆದ ತಂಬಾಕು ವಿರೋಧಿ ಕಾರ್ಯದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಗುಟ್ಕ,ಬೀಡಿ ಸಿಗರೆಟ್ ಸೇವೆನೆಯಿಂದ ನಾವು ದೂರ ಇರುವುದಲ್ಲದೆ ಯುವಜನಾಂಗಕ್ಕೂ ತಿಳಿಸುವ ಪ್ರಯತ್ನ ನಡೆಯಬೇಕು ಎಂದರು.
ಸಮಾರಂಭ ಅಧ್ಯಕ್ಷತೆಯನ್ನು ರಮೇಶ್ ಕುಂಡಡ್ಕ ವಹಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಂಗಾಧರ ,ಅಭಿಷೇಕ್, ಜ್ಯೋತಿ, ಜಯಶ್ರೀ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ನವೀನ್ ಸ್ವಾಗತಿಸಿ, ಸುಮಾಲತ ವಂದಿಸಿದರು.

LEAVE A REPLY

Please enter your comment!
Please enter your name here