ಈಶ್ವರಮಂಗಲದಲ್ಲಿ ‘ಡಿ ಫ್ಯಾಕ್ಟೋ ಮೆನ್ಸ್ ಹಬ್’ಪುರುಷರ ಸಿದ್ದ ಉಡುಪುಗಳ ಮಳಿಗೆ ಶುಭಾರಂಭ

0

ಪುತ್ತೂರು: ಪುರುಷರ ಸಿದ್ದ ಉಡುಪುಗಳ ಮಳಿಗೆ ‘ಡಿ ಫ್ಯಾಕ್ಟೋ ಮೆನ್ಸ್ ಹಬ್’ ಜೂ.19ರಂದು ಈಶ್ವರಮಂಗಲ ಹಿರಾ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಮಳಿಗೆಯನ್ನು ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಉದ್ಘಾಟಿಸಿ ಶುಭ ಹಾರೈಸಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಈಶ್ವರಮಂಗಲ ಪೇಟೆಯಲ್ಲಿ ಹೊಸ ಹೊಸ ಉದ್ಯಮಗಳು ಆರಂಭಗೊಳ್ಳುತ್ತಿದ್ದು, ಉದ್ಯಮ ಹೆಚ್ಚಾದಂತೆ ಪೇಟೆ ಅಭಿವೃದ್ಧಿ ಹೊಂದುತ್ತದೆ. ಇಲ್ಲಿ ಶುಭಾರಂಭಗೊಂಡ ಡಿ ಫ್ಯಾಕ್ಟೋ ಡ್ರೆಸ್ ಮಳಿಗೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಗಜಾನನ ಪ್ರೌಢ ಶಾಲೆಯ ಸಂಚಾಲಕ ಶಿವರಾಮ ಮಾತನಾಡಿ ಇಲ್ಲಿ ಶುಭಾರಂಭಗೊಂಡ ಡ್ರೆಸ್ ಮಳಿಗೆ ಈಶ್ವರಮಂಗಲ ಪೇಟೆಯ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.

ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ, ಇಲ್ಲಿ ಶುಭಾರಂಭಗೊಂಡ ʼಡಿ ಫ್ಯಾಕ್ಟೋ ಡ್ರೆಸ್ ಮಳಿಗೆಯಲ್ಲಿ ಗ್ರಾಹಕರಿಗೆ ಉತ್ತಮ ಉಡುಪು ಮತ್ತು ಸೇವೆ ಲಭ್ಯವಾಗಲಿ, ಲಾಭದ ಒಂದಂಶ ಸಮಾಜ ಸೇವೆಗೆ ವಿನಿಯೋಗವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ ಪಕ್ಕಳ ಮಾತನಾಡಿ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಈಶ್ವರಮಂಗಲ ಪೇಟೆಯಲ್ಲಿ ನೂತನ ಡ್ರೆಸ್ ಮಳಿಗೆ ಶುಭಾರಂಭಗೊಂಡಿರುವುದು ಸಂತಸ ತಂದಿದೆ, ವ್ಯಾಪಾರದಲ್ಲಿ ಯಶಸ್ಸು ಕಾಣುವ ಮೂಲಕ ಮಳಿಗೆ ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.

ಪಾಳ್ಯತ್ತಡ್ಕ ಮಸೀದಿಯ ಖತೀಬ್ ನಝೀರ್ ಅಝ್ಹರಿ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಈಶ್ವರಮಂಗಲ ಪೇಟೆಯಲ್ಲಿ ಹೊಸ ಡ್ರೆಸ್ ಮಳಿಗೆ ಶುಭಾರಂಭಗೊಂಡಿರುವುದು ಸಂತಸದ ವಿಚಾರ, ಇದು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಈಶ್ವರಮಂಗಲ ಪೇಟೆಯಲ್ಲಿ ಸಾಕಷ್ಟು ವ್ಯಾಪಾರ, ವ್ಯವಹಾರಗಳು ನಡೆಯುತ್ತಿದ್ದು ಪೇಟೆ ಕ್ಷಿಪ್ರ ಅಭಿವೃದ್ಧಿಯನ್ನು ಕಾಣುತ್ತಿದೆ. ಇದೀಗ ಹೊಸ ಡ್ರೆಸ್ ಮಳಿಗೆ ಶುಭಾರಂಭಗೊಂಡಿರುವುದರಿಂದ ಪೇಟೆಗೆ ಇನ್ನಷ್ಟು ಮೆರುಗು ಬಂದಿದೆ. ಈಶ್ವರಮಂಗಲದ ಅಭಿವೃದ್ಧಿಗೆ ಇಲ್ಲಿನ ಉದ್ಯಮಿ ಹಿರಾ ಖಾದರ್ ಹಾಜಿಯವರ ಕೊಡುಗೆಯೂ ಅಪಾರ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ ಪಳ್ಳತ್ತೂರು, ಮಾಜಿ ಸದಸ್ಯರಾದ ಖಾದರ್ ಕರ್ನೂರು, ಕೆ.ಎಂ ಮಹಮ್ಮದ್, ಹಿರಾ ಕಾಂಪ್ಲೆಕ್ಸ್ ಮಾಲಕ ಖಾದರ್ ಹಾಜಿ, ಮಾಡನ್ನೂರು ನೂರುಲ್ ಹುದಾ ಮ್ಯಾನೇಜರ್ ಖಲೀಲುರಹ್ಮಾನ್ ಅರ್ಶದಿ ಕೋಲ್ಪೆ, ಮೇನಾಲ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆನಸಿನಕಾಣ, ಈಶ್ವರಮಂಗಲ ಸಿಟಿ ಜ್ಯುವೆಲ್ಸ್ ಮಾಲಕ ರಾಜೇಶ್, ಗೀರೀಶ್ ಕುಮಾರ್ ರೈ ಮರಕ್ಕಡ, ಇ.ಎ ಮಹಮ್ಮದ್ ಕುಂಞಿ ಮತ್ತಿತರ ಹಲವರು ಉಪಸ್ಥಿತರಿದ್ದರು.
ಮುಝಮ್ಮಿಲ್ ಸ್ವಾಗತಿಸಿದರು. ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ ವಂದಿಸಿದರು. ಡಿ ಫ್ಯಾಕ್ಟೋ ಮೆನ್ಸ್ ಹಬ್‌ನ ಪಾಲುದಾರರಾದ ಅಬ್ದುಲ್ ರಹಿಮಾನ್ ಮತ್ತು ಸವಾದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಸಮೀರ್ ಸಹಕರಿಸಿದರು.

ಡ್ರೆಸ್ ಸ್ಟಿಚ್ ಕೂಡಾ ಲಭ್ಯ:
ಡಿ ಫ್ಯಾಕ್ಟೋ ಮೆನ್ಸ್ ಹಬ್ ಮಳಿಗೆಯಲ್ಲಿ ಪುರುಷರ ಎಲ್ಲಾ ವಿಧದ ಸಿದ್ದ ಉಡುಪುಗಳು ಲಭ್ಯವಿರಲಿದ್ದು ಮದುವೆ, ಎಂಗೇಜ್‌ಮೆಂಟ್ ಮೊದಲಾದ ಕಾರ್ಯಕ್ರಮಗಳಿಗೆ ಬೇಕಾದ ಡ್ರೆಸ್‌ನ್ನು ಸ್ಟಿಚ್ ಮಾಡಿ ಕೊಡಲಾಗುವುದು ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ:
ರೂ.1499ಕ್ಕಿಂತ ಮೇಲ್ಪಟ್ಟು ಡ್ರೆಸ್ ಖರೀದಿಸುವ ಗ್ರಾಹಕರಿಗೆ ಕೂಪನ್ ನೀಡುತ್ತಿದ್ದು, ಅದರಲ್ಲಿ ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here