ಪುತ್ತೂರು: ನುಸ್ರತುಲ್ ಅನಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಕಟ್ಟತ್ತಾರು ಇದರ ವತಿಯಿಂದ ಕಟ್ಟತ್ತಾರು ಜಮಾಅತಿಗೊಳಪಟ್ಟ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜೂ.18ರಂದು ನುಸ್ರತುಲ್ ಇಸ್ಲಾಂ ಮದ್ರಸ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಟ್ಟತ್ತಾರು ಜಮಾಅತ್ ಅಧ್ಯಕ್ಷ ಪಿ.ಯಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ, ಮಕ್ಕಳ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಪ್ರೋತ್ಸಾಹಿಸಿದರೆ ಅವರು ಉನ್ನತ ಸ್ಥಾನಕ್ಕೇರಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ವಿಷಯದಲ್ಲಿ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ಸರಕಾರಿ ಪದವಿ ಕೆಯ್ಯೂರು ಸರಕಾರಿ ಪ.ಪೂ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಇಸ್ಮಾಯಿಲ್ ಮಾತನಾಡಿ ವಿದ್ಯಾರ್ಥಿಗಳು ಲೌಕಿಕ ಮತ್ತು ಧಾರ್ಮಿಕ ವಿಧ್ಯೆ ಪಡೆದಾಗ ಇಹಪರ ವಿಜಯ ಸಾಧ್ಯ. ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡಿದಾಗ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ, ಲೌಕಿಕ ಶಿಕ್ಷಣದ ಜೊತೆ ಧಾರ್ಮಿಕ ವಿಧ್ಯಾಭ್ಯಾಸ ಪಡೆಯಲು ವಿದ್ಯಾರ್ಥಿಗಳ ಪೋಷಕರು ಮುತುವರ್ಜಿ ವಹಿಸಬೇಕೆಂದು ಹೇಳಿದರು. ಜಮಾಅತ್ ಖತೀಬ್ ಇಸಾಕ್ ಬಾಹಸನಿ ಕಾರ್ಯಕ್ರಮ ಉದ್ಘಾಟಿಸಿದರು. ಜಮಾಅತ್ ಉಪಾಧ್ಯಕ್ಷ ಹಾಜಿ ಎನ್.ಎಂ ಉಮ್ಮರ್ ಉಸ್ತಾದ್ ನಂಜೆ ದುವಾ ನೆರವೇರಿಸಿದರು. ಸದರ್ ಮುಅಲ್ಲಿಂ ಸಿದ್ದೀಕ್ ಫೈಝಿ ಶುಭ ಹಾರೈಸಿದರು.
ಸಿಐಎಸ್‌ಎಫ್‌ನ ಅಸಿಸ್ಟಂಟ್ ಸಬ್ ಇನ್ಸ್‌ಪೆಕ್ಟರ್ ಸುಲೈಮಾನ್ ಎಂ, ಡಾ. ಫಾತಿಮಾ ಆಸಿಫ್ ಬಿಎನ್‌ವೈಎಸ್, ಬಿ ಫಾರ್ಮಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಮಹಮ್ಮದ್ ಹಾಶಿಮ್, ಬಿಎಸ್ಸಿ ಡಯಾಲಿಸಿಸ್ ಪದವಿ ಪಡೆದ ಮಹಮ್ಮದ್ ಫಯಾಝ್, ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಫಾತಿಮಾ ಆಫ್ರೀನ, ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಜುವೈರಿಯ, ಅಫ್ರಾ, ಮದ್ರಸದಲ್ಲಿ 5ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಮುಹಮ್ಮದ್ ಸರೀಕ್, ಫಾತಿಮಾ ಬರ್ಝಾ, 7ನೆ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಫಾತಿಮಾ ಅಫ್ರೀನ, ಸಬಾನ, ಆಯಿಷತ ಶಿಫಾನ, ಆಯಿಷತ್ ಫಿಝಾ, ಸರೀನ, ಆಯಿಶತ್ ಅಜ್ಮೀನ, ಫಾತಿಮತ್ ಸಝ, ಫಾತಿಮಾ ಬಿಶಾರ ಹಾಗೂ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಜೈನಬ, ತಂಸೀರ್ ಮಹಮ್ಮದ್ ಮೊದಲಾದವರನ್ನು ಸನ್ಮಾನಿಸಿ ಅಭಿನಂದಿಲಾಯಿತು. ವೇದಿಕೆಯಲ್ಲಿ ಮುಅಲ್ಲಿಮರಾದ ಮುಹಿಯದ್ದೀನ್ ಮುಸ್ಲಿಯಾರ್, ಉಮ್ಮರ್ ಅಝ್‌ಹರಿ ಉಪಸ್ಥಿತರಿದ್ದರು. ಯಂಗ್‌ಮೆನ್ಸ್ ಅಧ್ಯಕ್ಷ ಕೆ ಎಂ ಶಾಕಿರ್ ಸ್ವಾಗತಿಸಿದರು. ಕಾರ್ಯದರ್ಶಿ ಮುಹಸಿನ್ ವಂದಿಸಿದರು.