ಪರ್ಲಡ್ಕ: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಎಂಬ ಧಾರ್ಮಿಕ ಸಂಘಟನೆಯು ಇಂದು ಜಗತ್ತಿನಾದ್ಯಂತ ಕಾರ್ಯಾಚರಿಸುತ್ತಿದ್ದು, ಇದು ಅಹ್ಲುಸುನ್ನದ ನೈಜ ಪಥವಾಗಿದೆ ಎಂದು ಸಮಸ್ತ ಜಂ ಇಯ್ಯತುಲ್ ಖುತಬಾ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಹೇಳಿದರು. ಸಮಸ್ತ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಇಂದು ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂದೇಶ ಭಾಷಣವನ್ನು ಮಾಡಿದ ಅವರು, ಸಮುದಾಯದ ಆಧ್ಯಾತ್ಮಿಕ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಮಸ್ತದ ಕೊಡುಗೆಯು ಅವರ್ಣನೀಯವಾಗಿದ್ದು, ಇಂದು ಅದರ ಸರಿಸಾಟಿಯಿಲ್ಲದ
ಕಾರ್ಯ ವೈಖರಿಯು ಜಗತ್ತಿನ ಗಮನಸೆಳೆದಿದೆ ಎಂದರು.
ಜಮಾಅತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಧ್ವಜಾರೋಹಣ ನೆರವೇರಿಸಿದರು. ಅಬ್ದುಲ್ ರಶೀದ್ ರಹ್ಮಾನಿ ದುಆಗೈದರು. ಜಮಾಅತ್ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ನಿಶ್ಮಾ, ಸಮಸ್ತ ವಿಧ್ಯಾಭ್ಯಾಸ ಮಂಡಳಿ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಜಮಾಅತ್ ಸಮಿತಿ ಸದಸ್ಯರಾದ ಉಬೈದ್ ಗೋಳಿಕಟ್ಟೆ,ಅದ್ದು ಗುಡ್ಡೆ,ಸದರ್ ಉಸ್ತಾದ್ ಜಲಾಲುದ್ದೀನ್ ದಾರಿಮಿ, ಇಹ್ಯಾಹುಸ್ಸುನ್ನ ಯಂಗ್ ಮೆನ್ಸ್ ಅಧ್ಯಕ್ಷ ಸಿನಾನ್ ಪರ್ಲಡ್ಕ, ಉಪಾಧ್ಯಕ್ಷ ಸುಹೈಲ್ ಪರ್ಲಡ್ಕ, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ತ್ವಾಹಾ, ಸದಸ್ಯರಾದ ಮುಸ್ತಫಾ ಫೈಝಿ,ಅಲೀ ಪರ್ಲಡ್ಕ, ಲತೀಫ್, ಅಶ್ರಫ್ಎ. ಎಂ ಸಹಿತ ಹಲವಾರು ಸದಸ್ಯರು ಭಾಗವಹಿಸಿದ್ದರು. ಮುಸ್ತಫಾ ಫೈಝಿ ಮಲಪ್ಪುರಂ ಕಾರ್ಯಕ್ರಮ ನಿರೂಪಿಸಿದರು.