ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಎಂಬಲ್ಲಿ ಸ್ಕೂಟಿಯೊಂದಕ್ಕೆ ಅಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ತಾಯಿ ಹಾಗೂ ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜು.8ರಂದು ಸಂಜೆ ಸಂಭವಿಸಿದೆ.
ಗಾಯಾಳುಗಳನ್ನು ಪೆರಿಯಡ್ಕದ ಶೇಖರ್ ಗೌಡ ಎಂಬವರ ಪತ್ನಿ ಧಮಯಂತಿ (39), ಮತ್ತಾಕೆಯ ಮಕ್ಕಳಾದ ಮನಿಷಾ (14), ಸನಿತಾ (11) ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸಿದಾಕ್ಷಣ ಉಪ್ಪಿನಂಗಡಿಯ 108 ಅಂಬುಲೆನ್ಸ್ ನ ಸಿಬ್ಬಂದಿಗಳಾದ ಅವಿನಾಶ್ ಹೆಚ್ ಎಂ, ಚಾಲಕ ಶೈಲಾನಿ ಶೇಖ್ ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳೂಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.