ಪಡ್ನೂರು ಗ್ರಾಮಸ್ಥರ ಪರವಾಗಿ ಅಭಿನಂದನೆ- ಸಾವಿರಾರು ಮಂದಿ ಭಾಗಿ
ಪುತ್ತೂರು ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ವರ್ಗಾವಣೆ-ಸಿ ಎಂ ಮೆಚ್ಚುಗೆ
ನನಗೆ ಬಂದ ಮಾಹಿತಿ ಪ್ರಕಾರ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಅಧಿಕಾರಿಗಳ ವರ್ಗಾವಣೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಷ್ಟೊಂದು ದೊಡ್ಡ ಮಟ್ಟದಲ್ಲಿ ನನ್ನನ್ನು ಗುರುತಿಸಿದ್ದು, ನನಗೆ ಅತೀವ ಸಂತೋಷ ತಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ತಾನು ಯಾವತ್ತೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.ನಾನು ಶಾಸಕನಾದ ಬಳಿಕ 94ಸಿ, ಅಕ್ರಮ ಸಕ್ರಮದಲ್ಲಿ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿ ಕೊಟ್ಟಿದ್ದೇನೆ ಎಂದು ರೈ ಹೇಳಿದರು.
ಅಶಕ್ತರ ಚಿಕಿತ್ಸೆಗೆ ರೂ. 62ಸಾವಿರ ವಿತರಣೆ
ಶಾಸಕರ ವಿಜಯೋತ್ಸವದ ವೇಳೆ ಹೂ ಹಾರ, ಸಿಡಿಮದ್ದಿಗಾಗಿ ಸಂಗ್ರಹವಾಗಿ ಬಳಿಕ ಶಾಸಕರ ಕೋರಿಕೆಯಂತೆ ಖರ್ಚು ಮಾಡದೆ ಉಳಿಕೆಯಾಗಿದ್ದ ಸುಮಾರು ರೂ.62 ಸಾವಿರವನ್ನು ಪಡ್ನೂರು ಪರಿಸರದ ಅಶಕ್ತರ ಚಿಕಿತ್ಸೆಗಾಗಿ ಈ ಸಂದರ್ಭ ವಿತರಿಸಲಾಯಿತು.ಪಂಜಿಗುಡ್ಡೆ ಈಶ್ವರ ಭಟ್ ಅವರ ನೇತೃತ್ವದಲ್ಲಿ ಅಶ್ವತ್ಥಕಟ್ಟೆ ದೇವತಾ ಸಮಿತಿ ಪಡ್ನೂರು, ಧೂಮಾವತಿ ಯುವಕ ಮಂಡಲ ಪಡ್ನೂರು, ಸ್ವಸ್ತಿಕ್ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಪಡ್ನೂರು ಇದರ ವತಿಯಿಂದ ನೀಡಲ್ಪಟ್ಟಿದ್ದ ಈ ಹಣವನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ವಿತರಿಸಿದರು.ಇದೇ ಸಂದರ್ಭದಲ್ಲಿ ನೂರಾರು ಮಂದಿ ವಿವಿಧ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.ಅಶೊಕ್ ಕುಮಾರ್ ರೈ ಅವರು ಸಭೆಗೆ ಆಗಮಿಸುತ್ತಿದ್ದಂತೆ ಬ್ಯಾಂಡ್ ವಾದನದೊಂದಿಗೆ ಗರ್ನಲ್ ಸಿಡಿಸಿ ಸ್ವಾಗತಿಸಲಾಯಿತು.
ಸಾವಿರಾರು ಮಂದಿಗೆ ಊಟದ ವ್ಯವಸ್ಥೆ
ಸುಮಾರು ಒಂದೂವರೆ ಸಾವಿರ ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ಎಲ್ಲರಿಗೂ ಬೆಳಿಗ್ಗೆ ಸೋಡಾ ಶರ್ಬತ್, ಮಧ್ಯಾಹ್ನ ಸವಿಯಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಪಡ್ನೂರು ಗ್ರಾಮಸ್ಥರ ಪರವಾಗಿ ಅಭಿನಂದನಾ ಕಾರ್ಯಕ್ರಮವು ಜು.16ರಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ನಡೆಯಿತು.ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಇತರರು ಶಾಸಕ ಅಶೋಕ್ ಕುಮಾರ್ ರೈರವರಿಗೆ ಮಾಲಾರ್ಪಣೆ ಮಾಡಿ ತಲೆಗೆ ಪೇಟ ತೊಡಿಸಿ ಫಲಪುಷ್ಪ ನೀಡಿ, ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕಳೆದ ಚುನಾವಣೆಯಲ್ಲಿ ಜನರ ನಿರೀಕ್ಷೆಯಂತೆ ಮತ್ತು ಆಸೆಯಂತೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ.ಪುತ್ತೂರಿನಲ್ಲಿ ಕಾಂಗ್ರಸ್ ಶಾಸಕರು ಆಯ್ಕೆಯಾಗಿ ಬಂದಿದ್ದು, ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ.ನಿಮಗೆ ಯಾವ ರೀತಿಯ ಧನ್ಯವಾದ ಹೇಳಬೇಕೆಂದು ಗೊತ್ತಾಗುವುದಿಲ್ಲ.5 ವರ್ಷದ ಜನ ಸೇವೆ ಮಾಡುವ ಮೂಲಕ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದರು. ದ್ವೇಷದ ರಾಜಕಾರಣ ಯಾವತ್ತೂ ಸಲ್ಲದು, ಯಾವುದೇ ಸಮಸ್ಯೆಗಳು ಬಂದಾಗ ದ್ವೇಷ ರಾಜಕಾರಣ ಮಾಡದೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡಾಗ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಆಗಲಿದೆ ಎಂದು ಹೇಳಿದರು.
ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಮಿಕ್ಕಿ ಜನರನ್ನು ಸೇರಿಸಿಕೊಂಡು ನನಗೆ ಅಭಿನಂದನೆ ಸಮಾರಂಭ ಏರ್ಪಡಿಸಿದ್ದು ನೋಡಿದರೆ ಇದು ಕಾಂಗ್ರೆಸ್‌ಗೆ ಶಕ್ತಿ ತುಂಬುವ ಕೆಲಸ ಆಗಿದೆ ಎಂದು ಹೇಳಿದ ಶಾಸಕರು,ಈಶ್ವರ ಭಟ್ ಅವರಂತಹ 25 ಮಂದಿ ಜನರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಲ್ಲಿ ನಾವು ಮಾಡುವ ಅಭಿವೃದ್ಧಿ ಕೆಲಸದ ಮೂಲಕ ಮುಂದೆ ನಡೆಯುವ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಗೆಲ್ಲಲಿದೆ ಎಂದು ಹೇಳಿದರು.
ನಾವು ಪಕ್ಷ ಗಟ್ಟಿ ಮಾಡದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ.ಪಕ್ಷವಿದ್ದರೆ ಮಾತ್ರ ಕಾರ್ಯಕರ್ತರಿಗೆ ಸ್ಥಾನಮಾನ, ಸಾರ್ವಜನಿಕರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ.ನಾವು ಸಹಕಾರಿ ಕ್ಷೇತ್ರದಲ್ಲಿ ಹಿಂದುಳಿದಿದ್ದು 15 ಸಹಕಾರಿ ಸಂಘಗಳಲ್ಲಿ 6 ಮಾತ್ರ ಕಾಂಗ್ರೆಸ್ ಪಕ್ಷದ ಪರವಾಗಿದೆ.ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿಯೂ ನಾವು ಹಿಂದುಳಿದಿದ್ದೇವೆ.ಕ್ಯಾAಪ್ಕೋ ಸಂಸ್ಥೆಯನ್ನು ಹಂತ ಹಂತವಾಗಿ ಕಾಂಗ್ರೆಸ್‌ನ ಒಳಗೆ ಸೆಳೆಯುವ ಪ್ರಯತ್ನ ಮಾಡಲಾಗುವುದು.ಮುಂದೆ ನಡೆಯುವ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಬೇಕಾದರೆ ನಾವು ಎಲ್ಲಾ ಪಕ್ಷದವರ ಕೆಲಸ ಕಾರ್ಯಗಳನ್ನು ಪ್ರೀತಿ, ವಿಶ್ವಾಸದಿಂದ ಮಾಡಿ ಕೊಡುವ ಮೂಲಕ ಕಾಂಗ್ರೆಸ್‌ನತ್ತ ಸೆಳೆಯುವಂತೆ ಮಾಡಬೇಕಿದೆ.ಹೀಗಾದಲ್ಲಿ ಎಲ್ಲಾ ರಂಗದಲ್ಲೂ ಕಾಂಗ್ರೆಸ್ ಖಂಡಿತವಾಗಿಯೂ ಅಧಿಕಾರಕ್ಕೆ ಬರಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ವಿರೋಧ ಪಕ್ಷಗಳಿಂದ ಅಪಪ್ರಚಾರ: ಚುನಾವಣೆ ಸಂದರ್ಭದಲ್ಲಿ ನಾವು 5 ಗ್ಯಾರೆಂಟಿ ಯೋಜನೆಯನ್ನು ನೀಡಿದ್ದೆವು.ಆ 5 ಗ್ಯಾರೆಂಟಿಯನ್ನು ನಾವು ಚಾಚೂ ತಪ್ಪದೇ ಮಾಡಿ ಕೊಡುತ್ತೇವೆ.ಆದರೆ,ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಈ ಗ್ಯಾರೆಂಟಿ ಯೋಜನೆ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ.ಈಗಾಗಲೇ ನಾವು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಮಾಡುತ್ತಿದ್ದು ಬಿಜೆಪಿಯವರು ಈಗ ಉತ್ತರ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಅಶೋಕ್ ಕುಮಾರ್ ರೈ, ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಕೆಎಸ್‌ಆರ್‌ಟಿಸಿಗೆ ಲಾಭ ಆಗಿದೆ ಎಂದು ಅಽಕಾರಿಗಳೇ ಹೇಳಿದ್ದಾರೆ ಎಂದರು.ಬಿಜೆಪಿಯವರು ಹಿಂದುತ್ವ ಎಂದು ಹೇಳಿಕೊಂಡು ಏನೂ ಅಭಿವೃದ್ಧಿ ಮಾಡಿಲ್ಲ.ಬಹಳ ವರ್ಷದಿಂದ ಸರಕಾರಿ ಸ್ಥಳದಲ್ಲಿ ಮಂದಿರ, ದೇವಸ್ಥಾನ, ಮಸೀದಿ, ಚರ್ಚ್ಗಳಿದ್ದು, ಅದರ ಜಾಗ ಸಕ್ರಮ ಮಾಡುವಂತೆ ಸರಕಾರಕ್ಕೆ ಈಗಾಗಲೇ ಒತ್ತಾಯಿಸಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ.ಈ ಹಿಂದೆ ಬಿಜೆಪಿ ಅಽಕಾರದಲ್ಲಿದ್ದರೂ ಅವರಿಗೆ ಸಕ್ರಮ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
10 ದಿನದೊಳಗೆ ಶಾಸಕರ ಕಚೇರಿ ಆರಂಭ: ಹತ್ತು ದಿನದ ಒಳಗೆ ಪುತ್ತೂರಿನಲ್ಲಿ ಶಾಸಕರ ಕಚೇರಿ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.ಜನರ ಸೇವೆಗಾಗಿ ಬೆಂಗಳೂರಿನಲ್ಲಿ ಎರಡು ಪಿ ಎ ಮತ್ತು ಪುತ್ತೂರಿನಲ್ಲಿ ನಾಲ್ಕು ಪಿ ಎ ಗಳನ್ನು ನೇಮಕ ಮಾಡಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸೇವೆ ನೀಡಲಾಗುವುದು ಎಂದು ಶಾಸಕರು ಹೇಳಿದರು.
ಅಶೋಕ್ ಕುಮಾರ್ ರೈ ಓರ್ವ ಉತ್ತಮ ಜನಸೇವಕ-ಶಕುಂತಳಾ ಶೆಟ್ಟಿ: ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಮಾತನಾಡಿ ಅಶೋಕ್ ರೈ ಓರ್ವ ಉತ್ತಮ ಜನಸೇವಕರಾಗಿದ್ದು, ಜನರ ಪ್ರೀತಿ ವಿಶ್ವಾಸಗಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ನಿರಂತರ ಸೇವೆಯ ಮೂಲಕ ಜನರ ಪ್ರೀತಿ ವಿಶ್ವಾಸ ಕೊನೆಯ ತನಕವೂ ಮುಂದುವರಿಯಲಿ ಎಂದು ಹೇಳಿದರು.ಈಶ್ವರ ಭಟ್ ಅವರ ನೇತೃತ್ವದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಈಶ್ವರ ಭಟ್ ಅವರ ಮೇಲಿಟ್ಟ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಅಶೋಕ್ ಕುಮಾರ್ ರೈ ಎಲ್ಲಾ ವರ್ಗದ ಜನರ ಭರವಸೆಯ ಶಾಸಕ-ಡಾ.ರಾಜಾರಾಂ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಕೆ.ಬಿ ಅವರು ಮಾತನಾಡಿ ಕರ್ನಾಟಕದಲ್ಲಿ ಅಽಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಜನರ ಭರವಸೆಯನ್ನು ಈಡೇರಿಸುವ ಸರಕಾರವಾಗಿದೆ.ಸರ್ವಾಂಗೀಣ ಅಭಿವೃದ್ಧಿಯ ಸಂಕಲ್ಪದೊAದಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಈ ಸರಕಾರ ಜನಮೆಚ್ಚುಗೆಗೆ ಪಾತ್ರವಾಗಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಬಂದಿರುವ ಅಶೋಕ್ ಕುಮಾರ್ ರೈ ಅವರು ಎಲ್ಲಾ ವರ್ಗದ ಜನರ ಭರವಸೆಯ ಶಾಸಕರಾಗಿದ್ಧಾರೆ ಎಂದರು. ಇಂತಹ ಜನಮೆಚ್ಚುಗೆಯ ಅಭಿನಂದನಾ ಸಮಾರಂಭ ಏರ್ಪಡಿಸಿದ ಪಂಜಿಗುಡ್ಡೆ ಈಶ್ವರ ಭಟ್ ಅವರ ಕಾರ್ಯಕ್ರಮದಿಂದ ಮನಸ್ಸು ತುಂಬಿ ಬಂದಿದೆ ಎಂದು ಹೇಳಿ ಅಭಿನಂದನೆಗಳನ್ನು ಸಲ್ಲಿಸಿದರು.
ಅಶೋಕ್ ರೈ ಭ್ರಷ್ಟಾಚಾರ ರಹಿತ ಅಭಿವೃದ್ದಿ ನೀಡಲು ಬಂದಿರುವ ಕ್ರಾಂತಿಕಾರಿ ಶಾಸಕ-ಮುರಳೀಧರ ರೈ: ಅಭಿನಂದನಾ ಭಾಷಣ ಮಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಅವರು ಮಾತನಾಡಿ ಜನಸೇವೆಯೇ ಜನಾರ್ದನ ಸೇವೆ ಎಂಬAತೆ ಜನರ ಸೇವೆ ಮಾಡುತ್ತಾ ಇವತ್ತು ಶಾಸಕರಾಗಿ ಆಯ್ಕೆಗೊಂಡ ಹೃದಯವಂತ, ಗುಣವಂತ ಕ್ರಾಂತಿಕಾರಿ ಶಾಸಕ ಅಶೋಕ್ ಕುಮಾರ್ ರೈ ಅವರು ಭ್ರಷ್ಟಾಚಾರ ರಹಿತ ಅಭಿವೃದ್ಧಿ ಸೇವೆ ನೀಡಲು ಮುಂದೆ ಬಂದಿರುವುದು ಬಡವರ ಪಾಲಿನ ಭಾಗ್ಯವಾಗಿದೆ ಎಂದರು.
ಪಂಜಿಗುಡ್ಡೆ ಈಶ್ವರ ಭಟ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಅಶೋಕ್ ಕುಮಾರ್ ರೈ ಅವರು ದ್ವೇಷದ ರಾಜಕೀಯ ಮಾಡಬಾರದೆಂದು ಹೇಳಿದಂತೆ ನಾವು ದ್ವೇಷದ ರಾಜಕೀಯ ಮಾಡದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿನ ಹಲವಾರು ರಸ್ತೆಗಳು ಆಗಬೇಕಾಗಿದ್ದು, ಶಾಸಕರು ಖಂಡಿತವಾಗಿ ಮಾಡಿ ಕೊಡುತ್ತಾರೆಂಬ ವಿಶ್ವಾಸವಿದೆ.ಅಲ್ಲದೆ ಹಲವಾರು ಮಂದಿ ವಸತಿಹೀನರಿದ್ದು, ಅವರಿಗೆ ವಸತಿ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಅಶೋಕ್ ಕುಮಾರ್ ರೈ ಅವರು ಉದ್ದಿಮೆಯಲ್ಲಿ ದುಡ್ಡು ಮಾಡಿ ಬಡವರಿಗೆ ಹಂಚಿ ರಾಜಕೀಯಕ್ಕೆ ಬಂದವರಾಗಿದ್ದಾರೆ ಹೊರತು ದುಡ್ಡು ಮಾಡಲು ರಾಜಕೀಯಕ್ಕೆ ಬಂದವರಲ್ಲ.ಹಗಲು ರಾತ್ರಿ ಎನ್ನದೆ ಬಡವರ ಸೇವೆಯಲ್ಲೇ ನಿರತರಾಗಿದ್ದಾರೆ ಎಂದು ಹೇಳಿದ ಈಶ್ವರ ಭಟ್, ಇಲ್ಲಿ ನಡೆಸಿದ ಅಭಿನಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ,ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ರಾಧಾಕೃಷ್ಣ ನಾÊಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿರಂಜನ್ ರೈ ಮಠಂತಬೆಟ್ಟು ಅವರು ಕಾರ್ಯಕ್ರಮ ನಿರ್ವಹಿಸಿದರು.ಮುರಳೀಕೃಷ್ಣ ಕಡವ ವಂದಿಸಿದರು.ಜಯಶ್ರೀ ಈಶ್ವರ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಸಾದ್ ಕೌಶಲ್ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ರೆ|ವಿಜಯ ಹಾರ್ವಿನ್, ಶಿವರಾಮ ಆಳ್ವ ಕುರಿಯ, ಕೃಷ್ಣಪ್ರಸಾದ್ ಆಳ್ವ, ಪುತ್ತುಹಾಜಿ ಮುರ, ಎಂ.ಪಿ.ಅಬೂಬಕ್ಕರ್, ಎಂ.ಪಿ. ಉಮ್ಮರ್, ಪ್ರಸನ್ನ ಕುಮಾರ್, ಚಂದ್ರಹಾಸ ಶೆಟ್ಟಿ, ರೋಶನ್ ರೈ ಬನ್ನೂರು, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಜಯಪ್ರಕಾಶ್ ಬದಿನಾರ್, ರೂಪೇಶ್ ಶೆಟ್ಟಿ, ವಿಕ್ರಂ ಶೆಟ್ಟಿ ಅಂತರ, ರಾಜಶೇಖರ್ ಜೈನ್, ಸುಭಾಶ್ ನಾಯಕ್, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ ನಾಯಕ್, ಡೆನ್ನಿಸ್ ಮಸ್ಕರೇನ್ಹಸ್, ಕೋಸ್ಟಲ್ ಕೋಕನೆಟ್, ಖಾದರ್ ಪೋಳ್ಯ, ರಂಜಿತ್ ಬಂಗೇರಾ, ಜಿನ್ನಪ್ಪ ಪೂಜಾರಿ ಮುರ, ಡಾ. ರಘು, ಸಂಕಪ್ಪ ಗೌಡ ಕುಂಬ್ಲಾಡಿ, ಶಿವನಾಥ ರೈ ಮೇಗಿನಗುತ್ತು, ಪ್ರಸನ್ನ ಭಟ್, ಪ್ರವೀಣ್‌ಚಂದ್ರ ಆಳ್ವ, ಇಬ್ರಾಹಿಂ ಖಲೀಲ್, ಉಮ್ಮರ್ ಪಟ್ಟೆ, ಹರಿನಾರಾಯಣ ಹೊಳ್ಳ, ಸಹಿತ ಸಾವಿರಾರು ಮಂದಿ ಪಾಲ್ಗೊಂಡಿದ್ದರು.ಅಶ್ವತ್ಥ ಕಟ್ಟೆ ದೇವತಾ ಸಮಿತಿ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಧೂಮಾವತಿ ಯುವಕ ಮಂಡಲದ ಅಧ್ಯಕ್ಷ ರೋಹನ್‌ರಾಜ್, ಸ್ವಸ್ತಿಕ್ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಗೌಡ, ಗಂಗಾಧರ ಗೌಡ, ಪ್ರಕಾಶ್ ಗೌಡ, ಅಪ್ಪಿ, ಧನಂಜಯ, ಮನೋಜ್, ಶಾಂತಪ್ಪ, ಅಜಿತ್, ನಾರಾಯಣ ಗೌಡ, ಸುಬ್ರಹ್ಮಣ್ಯ ಗೌಡ, ರಝಾಕ್, ಇಬ್ರಾಹಿಂ, ಶೀನಪ್ಪ ಪೂಜಾರಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.