ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಆಗಸ್ಟ್ ತಿಂಗಳಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಪ್ರತಿ ಜಿಲ್ಲೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಆಯ್ಕೆಯಾದವರು ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನಕ್ಕೆ ಅವಕಾಶ ಪಡೆಯಲಿದ್ದಾರೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಕವಿತೆಗಳಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 7 ಸಾವಿರ ರೂ., ತೃತೀಯ 5 ಸಾವಿರ ರೂ.ನಗದು ಸಹಿತ ಪ್ರಮಾಣಪತ್ರ ನೀಡಲಾಗುವುದು.ಆಗಸ್ಟ್ 2ನೇ ವಾರದಲ್ಲಿ ನಡೆಯುವ ದ.ಕ.ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ.’ಸ್ವರಾಜ್ಯ -ಸುರಾಜ್ಯ’ ಕವಿಗೋಷ್ಠಿಯ ವಿಷಯವಾಗಿದೆ. ಕನಿಷ್ಠ 60 ಪದಗಳು, ಗರಿಷ್ಠ 100 ಪದಗಳು. ಸ್ವರಾಜ್ಯ ವಿಷಯ ಬಿಟ್ಟು ಬೇರೆ ವಿಷಯದ ಮೇಲಿನ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ. ಯಾವುದೇ ಭಾರತೀಯ ಭಾಷೆಯಲ್ಲಿ ಕವನವಾಚನ ಮಾಡಬಹುದು. ಆದರೆ ಅದರ ಕನ್ನಡ ಕವಿತಾ ರೂಪವನ್ನು (ಭಾವಾರ್ಥವಲ್ಲ) ಕಳುಹಿಸಬೇಕು. ವಯೋಮಿತಿ ಇಲ್ಲ. ಕವನಗಳನ್ನು ಪರಿಮಳ ರಾವ್, ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ದ.ಕ. ಇವರ ವಾಟ್ಸಪ್ ಸಂಖ್ಯೆ +91 81237 16968 ಗೆ ಆಗಸ್ಟ್ 5ರೊಳಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.