ಪುತ್ತೂರು: ಭಾರತೀಯ ಜೀವ ವಿಮಾ ನಿಗಮ ಮತ್ತು ಸರಸ್ವತಿ ವಿದ್ಯಾ ಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವರ ಸಹಭಾಗಿತ್ವದಲ್ಲಿ ನಡುಗುಡ್ಡೆಯ ಸರಸ್ವತಿ ವಿದ್ಯಾ ಮಂದಿರದ ನೂತನ ನಿವೇಶನದಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ಆಚರಿಸಲಾಯಿತು.
ಭಾರತೀಯ ಜೀವ ವಿಮಾ ನಿಗಮದ ಚೀಫ್ ಮ್ಯಾನೇಜರ್ ಡಿ.ಬಾಲಕೃಷ್ಣ ಹಣ್ಣಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಸಿಸ್ಟೆಂಟ್ ಡಿವಿಷನಲ್ ಮ್ಯಾನೇಜರ್ ಜಯರಾಮ ನೆಲ್ಲಿತ್ತಾಯ ಮಾತನಾಡಿ ಹಣ್ಣಿನ ಗಿಡಗಳ ಮಹತ್ವ ಮತ್ತು ಗಿಡ ನೆಡುವುದರ ಬಗ್ಗೆ ವಿವರ ನೀಡಿದರು. ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್ ಮಾರ್ಗದರ್ಶನ ನೀಡಿದರು.
ಜೀವ ವಿಮಾ ನಿಗಮದ ಮುರಳೀಧರ, ಗುರುರಾಜ, ವೆಂಕಟೇಶ ಮೂರ್ತಿ, ನಟೇಶ ಉಡುಪ, ಸೀತಾ, ಪೂವಪ್ಪ, ಶರತ್ ಮತ್ತು ಪ್ರಕಾಶ್ ಉಪಸ್ಥಿತರಿದ್ದರು.
ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ ಕೊಡಂಕಿರಿ ಸ್ವಾಗತಿಸಿದರು. ಶಾಲಾ ಶಿಕ್ಷಣ ಸಂಯೋಜಕ ರಾಜಾರಾಮ ನೆಲ್ಲಿತ್ತಾಯ ಮತ್ತು ಮುಖ್ಯ ಗುರು ದಿವ್ಯಾ ಸಂಯೋಜಿಸಿದರು. ಶಿಕ್ಷಕಿಯರಾದ ಶ್ರೀಲಕ್ಷ್ಮಿ, ಆಶಾಲತಾ, ಪವಿತ್ರ, ಯಜ್ನೇಶ ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳು ಹಲವಾರು ಬಗೆಯ ಫಲ ನೀಡುವ ಗಿಡಗಳನ್ನು ನೆಟ್ಟರು.