ಪುತ್ತೂರು: ಆರ್ಯಾಪು ಗ್ರಾಮದ ಗ್ರಾಮ ದೇವಸ್ಥಾನವಾದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ. 19ರಂದು ಸೋಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ, ವೃತಧಾರಿಗಳಿಗೆ ಅನ್ನದಾನ ನಡೆಯಿತು.
ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಗೂ ಪರಿವಾರ ದೇವರಿಗೆ ಪೂಜೆ ನಡೆದು, ಪ್ರಸಾದ ವಿತರಿಸಲಾಯಿತು. ಬಳಿಕ ಸೋಣ ಶನಿವಾರ ವೃತಧಾರಿಗಳಿಗೆ ಅನ್ನದಾನ ಸೇವೆ ಜರಗಿತು.
ಸರ್ವಸೇವೆ, ಮಹಾಪೂಜೆ, ಕ್ಷೀರಾಭಿಷೇಕ, ಬಲಿವಾಡು ಸೇವೆ, ಕಲಶಸ್ನಾನ, ಹೂವಿನಪೂಜೆ, ಎಳ್ಳೆಣ್ಣೆ ಸೇವೆ, ಕುಂಕುಮಾರ್ಚನೆ ಸೇವೆ ನಡೆಯಲಿದೆ. ಈ ಸೇವೆಗಳು ಆ. 26ರ ಶನಿವಾರ ಹಾಗೂ ಸೆ. 2, 9 ಹಾಗೂ 16ರ ಶನಿವಾರದಂದು ಕೂಡ ವಿಶೇಷ ಪೂಜೆ ನಡೆಯಲಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಸದಸ್ಯ ದೇವಯ್ಯ ಗೌಡ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.
ನಾಗರಪಂಚಮಿ ವಿಶೇಷ:
ನಾಗರಪಂಚಮಿ ಹಬ್ಬದ ಪ್ರಯುಕ್ತ ಆಗಸ್ಟ್ 21ರಂದು ಸೋಮವಾರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12ರವರೆಗೆ ದೇವಸ್ಥಾನದ ನಾಗಸನ್ನಿಧಿಯಲ್ಲಿ ಕ್ಷೀರಾಭಿಷೇಕ, ನಾಗತಂಬಿಲ, ಪಂಚಾಮೃತಾಭಿಷೇಕ, ನಾಗಪೂಜೆ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.