ಕಿಲ್ಲೆ ಮೈದಾನದಲ್ಲಿ ಹೋಂಡಾ ಬಿಗ್‌ವಿಂಗ್ – ಬೈಕ್‌ಗಳ ಮೆಗಾ ಕಾರ್ನಿವಲ್: ಇಂದು ಕಡೆ ದಿನ

0

ಮಂಗಳೂರು: ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಹೋಂಡಾ ದ್ವಿಚಕ್ರ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡುತ್ತ್ತಿರುವ ಕಾಂಚನ ಮೋಟಾರ್‍ಸ್‌ನ ಅಂಗ ಸಂಸ್ಥೆ, ದ.ಕ ಹಾಗೂ ಉಡುಪಿ ಜಿಲ್ಲೆಯ ಹೋಂಡಾ ಬಿಗ್‌ವಿಂಗ್ ಬೈಕ್‌ಗಳ ಅಧಿಕೃತ ಡೀಲರ್ ಆಗಿರುವ ಕಾಂಚನ ಹೋಂಡಾವು ಪುತ್ತೂರು ಹಾಗೂ ಸುತ್ತಮುತ್ತಲಿನ ಜನತೆಯ ಅನುಕೂಲಕ್ಕಾಗಿ ಹೋಂಡಾ ಬಿಗ್ ಬೈಕ್‌ಗಳ ಡಿಸ್‌ಪ್ಲೇ ಮತ್ತು ಟೆಸ್ಟ್‌ರೈಡ್‌ನ್ನು ಪುತ್ತೂರು ಕಿಲ್ಲೆ ಮೈದಾನದಲ್ಲಿ ಆ.30ರಂದು ಪ್ರಾರಂಭಗೊಂಡಿದ್ದು ಆ.31ರಂದು ಕೊನೆಗೊಳ್ಳಲಿದೆ.

ಹೋಂಡಾದ ಬಿಗ್ ಬೈಕ್‌ಗಳು ರೂ.2 ಲಕ್ಷ ಎಕ್ಸ್ ಶೋರೂಂನಿಂದ ಪ್ರಾರಂಭವಾಗುತ್ತದೆ.ಇದೀಗ ಗ್ರಾಹಕರು ಕೇವಲ ರೂ.9999ನ್ನು ಮಂಗಡ ಪಾವತಿಸಿ, ಶೇ.6.4ರ ಬಡ್ಡಿ ದರದಲ್ಲಿ ಹೋಂಡಾದ ಬಿಗ್ ಬೈಕ್‌ನ್ನು ತಮ್ಮದಾಗಿಸಬಹುದಾಗಿದೆ.ಈ ಕಾರ್ನಿವಲ್‌ನಲ್ಲಿ ಬಿಗ್ ಬೈಕ್‌ಗಳನ್ನು ಖರೀದಿಸಿದಲ್ಲಿ ಸ್ಪಾಟ್ ಬುಕಿಂಗ್ ಕೊಡುಗೆಯಾಗಿ ಬಿಡಿಭಾಗಗಳ ಮೇಲೆ ರೂ.2500 ರಿಯಾಯಿತಿ, ರೂ.5೦೦೦ ಎಕ್ಸ್‌ಚೇಂಜ್ ಬೋನಸ್ ಹಾಗೂ ಉಡುಗೊರೆಯಾಗಿ ಹೋಂಡಾ ಹೆಲ್ಮೆಟ್, ಪ್ರೀಮಿಯಂ ರೈನ್ ಕೋಟ್, ಪೆಟ್ರೋಲ್‌ನ್ನು ಪಡೆಯಬಹುದಾಗಿದೆ.ಹೋಂಡಾ ಬಿಗ್‌ವಿಂಗ್ ಸಂಸ್ಥೆಯು 1 ಲಕ್ಷಕ್ಕಿಂತಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದು ಇದರ ಸಂಭ್ರಮಾಚರಣೆ ಪ್ರಯುಕ್ತ ಮೊದಲ 10 ಸಾವಿರ ಗ್ರಾಹಕರಿಗೆ 10 ವರ್ಷಗಳ ವಿಸ್ತತ ವ್ಯಾರಂಟಿಯನ್ನು ನೀಡಲಿದ್ದಾರೆ.
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಕಾಂಚನ ಹೋಂಡಾ ಬಿಗ್‌ವಿಂಗ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರೀಮಿಯಂ ಬೈಕ್ ಆಕಾಂಕ್ಷಿಗಳು ಹೋಂಡಾ ಪ್ರೀಮಿಯಂ ಬೈಕ್‌ಗಳ ಟೆಸ್ಟ್ ರೈಡ್ ಜತೆಗೆ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಗಳ ಸೌಲಭ್ಯವನ್ನೂ ಪಡೆಯಬಹುದಾಗಿದೆ. ಬಿಗ್ ಬೈಕ್‌ಗಳ ಬಗೆಗಿನ ಹೆಚ್ಚಿನ ಮಾಹಿತಿ ಹಾಗೂ ಟೆಸ್ಟ್ ರೈಡ್‌ಗಾಗಿ ಕೊಟ್ಟಾರ ಚೌಕಿಯಲ್ಲಿರುವ ಹೋಂಡಾ ಬಿಗ್‌ವಿಂಗ್ ಮಂಗಳೂರು ಶೋರೂಂನ್ನು ಸಂಪರ್ಕಿಸಬಹುದು ಅಥವಾ 8147599847 ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here