ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ, ಕಾರ್ಯದರ್ಶಿ ಜಯಲಕ್ಷ್ಮೀ
ಪುತ್ತೂರು: ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು ಇದರ 2023-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಸಾದ್ ಕಲ್ಲರ್ಪೆ, ಕಾರ್ಯದರ್ಶಿಯಾಗಿ ಜಯಲಕ್ಷ್ಮೀ ಡಿ.ಎಸ್. ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಾರಾಯಣ ಪಾಟಾಳಿ ಅಟ್ಲಾರ್, ಬೇಬಿ ಕುಂತೂರು, ಜೊತೆ ಕಾರ್ಯದರ್ಶಿಯಾಗಿ ಧನುಷಾ, ಕೋಶಾಧಿಕಾರಿಯಗಿ ರವಿಕುಮಾರ್ ಬಾಕಿತ್ತಿಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೌಮ್ಯ ವಿನಯ್ ಕಡಮಜಲು, ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ್ ಪುತ್ತೂರು, ಸದಸ್ಯರಾಗಿ ಕೃಷ್ಣಪ್ರಸಾದ್ ಪುತ್ತೂರು, ಪ್ರಮೋದ್ ಪುತ್ತೂರು, ಬಾಲಕೃಷ್ಣ ಕಲ್ಲರ್ಪೆ, ಸುಷ್ಮಾ ದಾಮೋದರ್, ಕುಸುಮ ಕುಂತೂರು, ಸಾವಿತ್ರಿ ನಗರ, ಮಹಾಲಿಂಗ ಪಂಜಳ, ಕ್ಷಿತಿಜ್, ವಿನಯ ಪಟ್ಟೆ, ನವೀನ್ ಮೊಟ್ಟೆತಡ್ಕ, ಶ್ರೀಶ ಪುತ್ತೂರು, ಚೇತನ್ ಪಂಜಳ, ವರ್ಷಿತಾ, ದೀಪ್ತಿ ಸರವು, ಯಶೋಧ ಹಾಗೂ ಧನ್ವಿತ್ ಆಯ್ಕೆಯಾಗಿದ್ದಾರೆ.
ವಲಯವಾರು ಪ್ರತಿನಿಧಿಗಳು ಆರ್ಲಪದವು-ಮಮತಾ ಆರ್ಲಪದವು ಮತ್ತು ರಘು ಆಪಿನಮೂಲೆ, ಆಲಂಕಾರು,ಕುಂತೂರು-ಮಹೇಶ್ ಆಲಂಕಾರು, ನಿಡ್ಪಳ್ಳಿ, ಬೆಟ್ಟಂಪಾಡಿ-ಮಹಾಲಿಂಗ ಕೂಟೇಲು ಮತ್ತು ಪ್ರಸಾದ್ ಟೈಲರ್, ಉಪ್ಪಳಿಗೆ-ರಮೇಶ್ ಬಾಕಿತ್ತಿಮಾರ್ ಮತ್ತು ರವಿಕುಮಾರ್ ಬಾಕಿತ್ತಿಮಾರ್, ಮೈಂದನಡ್ಕ-ರಾಧಾಕೃಷ್ಣ ಬಡಕ್ಕಾಯೂರು ಮತ್ತು ತಿಮ್ಮಪ್ಪ ಪಡುಮಲೆ, ಪಟ್ಟೆ, ಸರವು-ಸುಬ್ಬಪ್ಪ ಪಟ್ಟೆ, ದೇರ್ಲ-ನಾರಾಯಣ ಕುಕ್ಕುಪುಣಿ, ಪಂಜಿಗುಡ್ಡೆ, ಕುಂಬ್ರ-ಬಾಲಕೃಷ್ಣ ಕುಂಬ್ರ , ಮುಂಡಾಳ-ಸತೀಶ್ ಮುಂಡಾಳ., ತಿಂಗಳಾಡಿ, ಮೇರ್ಲ-ವಿನಯ್ ಕಡಮಜಲು, ಬುಳ್ಳೇರಿಕಟ್ಟೆ, ಉಜಿರುಪಾದೆ, ಬಲ್ನಾಡು-ನಾರಾಯಣ ಅಟ್ಲಾರ್ ಮತ್ತು ರಾಮ ಪಾಟಾಳಿ, ಪುತ್ತೂರು, ನಗರ-ಹರಿಪ್ರಸಾದ್ ಡಿ.ಎಸ್ ಮತ್ತು ಕೃಷ್ಣಪ್ರಸಾದ್, ಮೊಟ್ಟೆತ್ತಡ್ಕ, ಮುಕ್ರಂಪಾಡಿ-ನವೀನ್ ಮೊಟ್ಟೆತಡ್ಕ ಮತ್ತು ಶಂಕರ ಪಾಟಾಳಿ, ಕಡಬ, ಮರ್ಧಾಳ-ಗೋಪಾಲಕೃಷ್ಣ ಮರ್ಧಾಳರವರನ್ನು ಆಯ್ಕೆ ಮಾಡಲಾಯಿತು.
ಅಧಿಕಾರ ಹಸ್ತಾಂತರ:
ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರವು ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯಲ್ಲಿ ನೆರವೇರಿತು. ಹಿರಿಯರಾದ ಅಪ್ಪಣ್ಣ ಪಾಟಾಳಿ, ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ ಉದ್ದಂತ್ತಡ್ಕ ಉಪಸ್ಥಿತರಿದ್ದರು. ನಿರ್ಗಮಿತ ಅಧ್ಯಕ್ಷ ಸುಬ್ಬಪ್ಪ ಪಟ್ಟೆ ಸ್ವಾಗತಿಸಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ಗಮಿತ ಕಾರ್ಯದರ್ಶಿ ಮಹೇಶ್ ಆಲಂಕಾರು ವಂದಿಸಿದರು. ಜೇಸಿಐ ವಲಯ ತರಬೇತುದಾರ ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.