ವೈಭವದ ಶೋಭಾಯಾತ್ರೆ, ಸಾಹಸ ಮಯ ಅಟ್ಟಿ ಮಡಿಕೆ, ವಿವಿಧ ಮನೋರಂಜಾ ಸ್ಪರ್ಧೆಗಳು
ಪುತ್ತೂರು; ವಿವಿಧ ಆಟೋಟ ಮನೋರಂಜನಾ ಸ್ಪರ್ಧೆಗಳು, ವೈಭವದ ಶೋಭಾಯಾತ್ರೆ ಹಾಗೂ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಸ್ಪರ್ಧೆಗಳೊಂದಿಗೆ ಸೆ.17ರಂದು ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ ನಡೆದ ಶ್ರೀವಿಷ್ಣು ಯುವಕ ಮಂಡಲ ಕೆಮ್ಮಾಯಿ, ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ ಇವುಗಳ ಸಂಟಿ ಸಹಯೋಗದೊಂದಿಗೆ ನಡೆದ ೬ನೇ ವರ್ಷದ ಮೊಸರು ಕುಡಿಕೆ ಉತ್ಸವಗಳು ಮೇಲೈಸಿದೆ.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ವಿಜಯ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಹರ್ಷ ಪಡಿವಾಳ್ ಮೂಡಾಯೂರುಗುತ್ತು ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಹರ್ಷ ಪಡಿವಾರ್ರವರು, ಹಲವು ವರ್ಷಗಳ ಹಿಂದೆ ಪಾಪಂಪರಿಕ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು. ಈಗ ಬಹಳಷ್ಟು ವಿಜೃಂಭನೆಯಿಂದ ಮೊಸರು ಕುಡಿಕೆ ಉತ್ಸವಗಳನ್ನು ನಡೆಸುತ್ತಿರುವುದುನ್ನು ಅವರು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ರೈ ಮಾತನಾಡಿ, ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮೊಸರು ಕುಡಿಕೆ ಉತ್ವವವನ್ನು ಆಚರಿಸಲಾಗುತ್ತಿದ್ದು ಈ ಭಾರಿ ಅದ್ದೂರಿಯಾಗಿ ನಡೆಸುತ್ತಿದೆ. ಅಟ್ಟಿ ಮಡಿಕೆ, ಶೋಭಾಯಾತ್ರೆಯನ್ನು ಪಡೀಲ್ ತನಕ ನಡೆಸಲಾಗುತ್ತಿದ್ದು ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿದ್ದಾರೆ ಎಂದರು.
ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷರು, ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಲೀಲಾವತಿ, ಕೆ.ಸರೋಜಿನಿ ಗೌಡ ಹೊಸಹೊಕ್ಲು, ಕೆಮ್ಮಾಯಿ ಶ್ರೀವಿಷ್ಣು ಯುವಕ ಮಂಡಲದ ಅಧ್ಯಕ್ಷ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಮಂಜುನಾಥ ಕೆಮ್ಮಾಯಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ವಂದಿಸಿದರು. ನಾಗೇಶ್ ಟಿ.ಎಸ್ ಹಾಗೂ ಡಾ. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಅಣ್ಣಿ ಪೂಜಾರಿ ಸಹಕರಿಸಿದರು.
ಬಳಿಕ ಪುಟಾಣಿಗಳಿಗೆ ಮುದ್ದುಕೃಷ್ಣ ಸ್ಪರ್ಧೆ, ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನಂತರ ನಡೆದ ಹಗ್ಗ ಜಗ್ಗಾಟದಲ್ಲಿ 9 ಮಹಿಳಾ ತಂಡಗಳು ಹಾಗೂ 19ಪುರುಷರ ತಂಡಗಳು ಭಾಗವಹಿಸಿದ್ದವು. ಮಹಿಳಾ ವಿಭಾಗದಲ್ಲಿ ಫ್ರೆಂಡ್ಸ್ ಕುಡ್ಪಲ್ತಡ್ಕ(ಪ್ರ), ಶ್ರೀ ದುರ್ಗಾ ಕೆಯ್ಯೂರು (ದ್ವಿ), ಪುರುಷರ ವಿಭಾಗದಲ್ಲಿ ಮಹಾಲಿಂಗೇಶ್ವರ ತಂಡ ಪುತ್ತೂರು(ಪ್ರ) ಹಾಗೂ ಭಾರತ್ ಅಡಿಟೋರಿಯಂ ವಿಟ್ಲ(ದ್ವಿ) ಬಹುಮಾನ ಪಡೆದುಕೊಂಡಿದೆ.
ವೈಭವದ ಶೋಭಾಯಾತ್ರೆ:
ಸಂಜೆ ನಡೆಯುವ ಶೋಭಾಯಾತ್ರೆ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಸ್ಫರ್ಧೆಗಳು ನಡೆಯಿತು. ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಳಿಯಿಂದ ಪ್ರಾರಂಭಗೊಂಡ ಶೋಭಾಯಾತ್ರೆಗೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ದೇವಸ್ಥಾನದ ಬಳಿಯಿಂದ ಪ್ರಾರಂಭಗೊಂಡ ಶೋಭಾಯಾತ್ರೆಯು ಕೃಷ್ಣನಗರ, ಕೇಪುಳು, ಪಡೀಲು ಹಾರಾಡಿ ತನಕ ಸಾಗಿ ನಂತರ ಕೆಮ್ಮಾಯಿಗೆ ಹಿಂತಿರುಗಿದೆ. ಶೋಭಾಯಾತ್ರೆಯ ಉದ್ದಕ್ಕೂ ಅಲ್ಲಲ್ಲಿ ಅಳವಡಿಸಲಾಗಿದ್ದ ಅಟ್ಟಿ ಮಡಿಕೆ ಒಡೆಯುವ ಸಾಹಸಮಯ ಸ್ಪರ್ಧೆಗಳು ನೋಡುಗರ ಕಣ್ಮನ ಸೆಳೆಯಿತು. ಕಲ್ಲಡ್ಕ ಬೊಂಬೆ ಕುಣಿತ, ಚೆಂಡೆ, ನಾಸಿಕ್ ಬ್ಯಾಂಡ್, ಡಿಜೆ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ನಡೆಯುವ ಸಂದರ್ಭದಲ್ಲಿ ವಾಹನ ಸವಾರರಿಗೆ ಯಾವುದೇ ತೊಡಕಾಗಂತೆ ಶಿಸ್ತು ಬದ್ದವಾಗಿ ಮೆರವಣಿಗೆಯನ್ನು ನಡೆಸಲಾಯಿತು. ಅಟ್ಟಿ ಮಡಕೆ ಒಡೆಯುವ ಸಾಹಸ ಮಯ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭ, ಬಹುಮಾನ ವಿತರಣೆ:
ಶೋಭಾಯಾತ್ರೆಯ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದು ಧರ್ಮದ ಅವಹೇಳನ, ಸವಾಲುಗಳ ಮಧ್ಯೆಯೂ ಕಳೆದ ಐದು ವರ್ಷಗಳಿಂದ ಕೆಮ್ಮಾಯಿಯಲ್ಲಿ ಮೊಸರುಕುಡಿಕೆ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸುವ ಮೂಲಕ ಯುವ ಜನತೆಯನ್ನು ಒಗ್ಗೂಡಿಸಿಕೊಂಡು ಸಾಮಾಜಿಕವಾಗಿ ಆಚರಣೆಯ ಜೊತೆಗೆ ಧರ್ಮ ಮೌಲ್ಯಗಳ ಪ್ರತಿಪಾಧನೆ ಮಾಡಲಾಗುತ್ತಿದೆ. ಇದು ಇಡೀ ಸಮಾಜದಲ್ಲಿ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ಮೊಸರು ಕುಡಿಕೆ ಉತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆದಿದೆ. ಇದಕ್ಕೆಲ್ಲಾ ಸಹಕರಿಸಿದವರು ಅವರು ಕೃತಜ್ಞತೆ ಸಲ್ಲಿಸಿದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಗೌಡ ಕೇಪುಳು, ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ರೈ, ವಿಷ್ಣು ಯುವಕ ಮಂಡಲದ ಅಧ್ಯಕ್ಷ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಮಂಜುನಾಥ ಕೆಮ್ಮಾಯಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ವಂದಿಸಿದರು. ನಾಗೇಶ್ ಟಿ.ಎಸ್ ಹಾಗೂ ಡಾ.ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಅಣ್ಣಿ ಪೂಜಾರಿ ಸಹಕರಿಸಿದರು.
ಭಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಶಶಾಂಕ ಕೊಟೇಚಾ, ಬಾಲಕೃಷ್ಣ ನಾಯಕ್ ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಸರುಕುಡಿಕೆ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.