ಕೆಯ್ಯೂರು: ಮಾಡಾವು ಅಯ್ಯಪ್ಪ ಭಕ್ತ ವೃಂದ ಹಾಗೂ ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಸೆ.17ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಾವು ಅಯ್ಯಪ್ಪ ಭಕ್ತ ವೃಂದ ಮಾಜಿ ಅದ್ಯಕ್ಷ ವಸಂತ ಪೂಜಾರಿ ತೆಂಗಿನ ಕಾಯಿ ಒಡೆಯುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಅವರ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಜ್ಯೋತಿ ಚಿಕಿತ್ಸಾಲಯದ ಡಾ. ರಾಮಚಂದ್ರ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯೆ ಮೀನಾಕ್ಷಿ ರೈ, ಮಾಜಿ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಮಾಜಿ ಸದಸ್ಯ ಮೋಹನ ರೈ ಬೇರಿಕೆ, ಅಭಿನವ ಕೇಸರಿ ಮಾಡಾವು ಉಪಾಧ್ಯಕ್ಷ ಹರೀಶ್ ಕುಲಾಲ್ ನೆಲ್ಲಿಗುರಿ, ಕಾರ್ಯದರ್ಶಿ ದೀಕ್ಷಿತ್ ಅಮಿನ್ ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು. ನಮಿತಾ ರೈ ಸ್ವಾಗತಿಸಿ, ಸೌರವ್ ವಂದಿಸಿ, ಬಾಸ್ಕರ ರೈ ಕಾರ್ಯಕ್ರಮ ನಿರೂಪಿಸಿದರು.
ಸಮರೋಪ ಸಮಾರಂಭ
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಡಾವು ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಸುಬ್ರಾಯ ಗೌಡ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಮಾಡಾವು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ, ಕೆದಂಬಾಡಿ-ಕೆಯ್ಯೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶಿವರಾಮ ರೈ ಕಜೆ,ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು,ಮಾಡಾವು ಅಭಿನವ ಕೇಸರಿ ಅಧ್ಯಕ್ಷ ಶಶಿಧರ ಆಚಾರ್ಯ ಮಾಡಾವು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದಿಕ್ಷೀತ್ ಅಮೀನ್, ದೀಪಕ್ ರೈ, ನಿತೀನ್ ಕಂಪ, ವಸಂತ ರೈ, ಜಯದೀಪ್, ಹರೀಶ್ ಕುಲಾಲ್, ಸಚೀನ್ ಪರ್ತ್ಯಡ್ಕ, ವಿನೋದ್ ಕೊಡ್ಲೆ, ಕುಸಾನ್, ಕವಿತ, ಮಂಜುಳ ಮಾಡಾವು, ಮನೋಜ್ ಬೊಳಿಕಲ, ಕಿರ್ತನ್, ಸುರೇಶ್ ಪರ್ತ್ಯಡ್ಕ, ರಕ್ಷಿತ್ ಉಪ್ಪಳಿಗೆ, ಪವನ್ ಕಂಪ, ರಾಕೇಶ್, ಸಹಕರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅರ್ಚನಾ ರೈ ಸ್ವಾಗತಿಸಿ, ವಸಂತ ರೈ ವಂದಿಸಿದರು.
ಬಹಳ ವಿಜೃಂಭಣೆಯಿಂದ ನಡೆದ ಕ್ರೀಡಾಕೂಟದ ಪಂದ್ಯಾಟದಲ್ಲಿ ಕಬಡ್ಡಿ ಪ್ರಥಮ ಸ್ಥಾನ ತುಳುನಾಡ್ ರೈಡರ್ಸ್ ಕಂಪ, ದ್ವೀತಿಯ ಶ್ರೀ ದುರ್ಗಾ ಕೆಯ್ಯೂರು, ವಾಲಿಬಾಲ್ ಪ್ರಥಮ ಸ್ಥಾನ ಅಭಿನವ ಕೇಸರಿ ಮಾಡಾವು ಬಿ, ದ್ವಿತೀಯ ತುಳುನಾಡ್ ಮಾಡಾವು, ಹಗ್ಗ ಜಗ್ಗಾಟ ಅಭಿನವ ಕೇಸರಿ ಮಾಡಾವು, ದ್ವಿತೀಯ ತುಳುನಾಡ್ ರೈಡರ್ಸ್ ಕಂಪ , ಟ್ರೋಪಿ, ನಗದು ಪ್ರಶಸ್ತಿಗಳನ್ನು ಪಡೆದು ಕೊಂಡಿತು. ಪುರುಷರ ವಿಭಾಗದಲ್ಲಿ ಮಡಕೆ ಒಡೆಯುವುದು, ಜಾರು ಕಂಬ ನಡಿಗೆ, ನಗರಕ್ಕೆ ಬಾಂಬ್, ಮಹಿಳೆಯರ ವಿಭಾಗದಲ್ಲಿ ಮಡಕೆ ಒಡೆಯುವುದು,ಸಂಗೀತ ಕುರ್ಚಿ, ಲಿಂಬೆ ಚಮಚ ಓಟ, ನಗರಕ್ಕೆ ಬಾಂಬ್, ಹಾಗೂ ಮಕ್ಕಳ ವಿಭಾಗದಲ್ಲಿ ಭಕ್ತಿ ಗೀತೆ, ಸಂಗೀತ ಕುರ್ಚಿ, ನಗರಕ್ಕೆ ಬಾಂಬ್, ಲಿಂಬೆ ಚಮಚ ಓಟ ನಡೆದು ಜಾರು ಕಂಬ ನಡಿಗೆಯಲ್ಲಿ ಭಾಗವಹಿಸಿ ವಿಜೇತರು ಬಹುಮಾನ ಪಡೆದು ಕೊಂಡರು.