ನೆಲ್ಯಾಡಿ: ಯಾವುದೇ ಪರವಾನಿಗೆ ಪಡೆಯದೇ ಮರದ ದಿಮ್ಮಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಸೆ.17ರಂದು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಮರ ಹಾಗೂ ಲಾರಿ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಸಕೇಶಪುರ ನಿವಾಸಿ ರಜಾಕ್ ಬಂಧಿತ ಆರೋಪಿ. ಮಾವು, ಉಪ್ಪಳಿಗೆ ಹಾಗೂ ಇತರೇ ಜಾತಿಯ ಸುಮಾರು 25 ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಸಂದೀಪ್, ರಾವುತಪ್ಪ ಬಿರಾದಾರ್, ಫಾರೆಸ್ಟರ್ ರಾಜೇಶ್, ಅರಣ್ಯ ವೀಕ್ಷಕ ದಿನೇಶ್ ಅವರು ಪಾಲ್ಗೊಂಡಿದ್ದರು.