ಸವಣೂರು : ದ.ಕ.ಜಿ.ಪಂ. , ತೋಟಗಾರಿಕೆ ಇಲಾಖೆ ಪುತ್ತೂರು ,ಡೆ. ಎನ್.ಆರ್.ಎಲ್. ಎಂ ಯೋಜನೆ ತಾ.ಪಂ. ಕಡಬ ,ಸವಣೂರು ಗ್ರಾ.ಪಂ. , ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿ ಇದರ ಸಹಭಾಗಿತ್ವದಲ್ಲಿ ಇದರ ಸಹಭಾಗಿತ್ವದಲ್ಲಿ 2023-24ನೇ ಸಾಲಿನ ಜಿಲ್ಲಾ ವಲಯ ಪ್ರಚಾರ ಸಾಹಿತ್ಯ ಯೋಜನೆಯ ಅಂಗವಾಗಿ ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ ,ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ವಾರು ತೋಟಗಾರಿಕೆ ಇಲಾಖೆಯ ವತಿಯಿಂದ ದೊರಕುವ ಸೌಲಭ್ಯ ಹಾಗೂ ತರಬೇತಿ ಕುರಿತು ಮಾಹಿತಿ ನೀಡಿದರು.ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ರಶ್ಮಿ ಅವರು ತರಬೇತಿ ನೀಡಿದರು.
ವೇದಿಕೆಯಲ್ಲಿ ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಗಿರಿಶಂಕರ ಸುಲಾಯ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿಕೇಶ್, ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ನಿರ್ದೇಶಕ ಶಿವಪ್ರಕಾಶ್, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್. ,ಲೆಕ್ಕ ಸಹಾಯಕ ಎ.ಮನ್ಮಥ , ಡೆ. ಎನ್.ಆರ್.ಎಲ್. ಎಂ ಯೋಜನೆಯ ತಾ.ಪಂ. ಕಡಬದ ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಚಾರ್ವಾಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸವಣೂರು ,ಬೆಳಂದೂರು,ಕಾಣಿಯೂರು ,ನರಿಮೊಗರು ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಕೃಷಿ ಸಖಿಗಳು ,ಪ.ಜಾ. ಮತ್ತು ಪ.ಪಂ.ದ ರೈತ ಫಲಾನುಭವಿಗಳು ಹಾಗೂ ಇತರ ರೈತರು ಪಾಲ್ಗೊಂಡಿದ್ದರು.ತರಬೇತಿ ಕಾರ್ಯಾಗಾರದ ಬಳಿಕ ತರಬೇತಿಯಲ್ಲಿ ಪಾಲ್ಗೊಂಡವರಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿಸಲಾಯಿತು.