ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಘಟಕದ ಆಶ್ರಯದಲ್ಲಿ ಅ.2ರಂದು ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ ಆಂದೋಲನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆ ಬೆಳಗ್ಗೆ 9.3೦ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ನಡೆಯಲಿದೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸುವರು. ಹಿರಿಯ ನ್ಯಾಯವಾದಿ ಚಿದಾನಂದ ಬೈಲಾಡಿ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಿರ್ದೇಶಕ ಹರ್ಷಿತ್ ಪಿಂಡಿವನ, ಬೋಧಕ ಬೋಧಕೇತರ ವೃಂದ ಹಾಗೂ ನಾಗರಿಕ ಸಮೂಹ ಉಪಸ್ಥಿತರಿರುವರು.
ಉದ್ಘಾಟನಾ ಸಮಾರಂಭದ ಬಳಿಕ ಪುತ್ತೂರಿನ ನಾನಾ ಭಾಗಗಳಲ್ಲಿ ಸ್ವಚ್ಚತೆ – ಜಾಗೃತಿ ಅರಿವು ಕಾರ್ಯಕ್ರಮ ನಡೆಯಲಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ, ಪ್ರೈವೇಟ್ ಬಸ್ ಸ್ಟಾಂಡ್ ಬಳಿ, ಆದರ್ಶ ಆಸ್ಪತ್ರೆ ಬಳಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬಳಿ, ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆ ಬಳಿ, ಅರುಣಾ ಟಾಕೀಸ್ ಬಳಿ, ದರ್ಬೆ ಸರ್ಕಲ್ ಬಳಿ, ಸುಳ್ಯ ಸರ್ಕಲ್ ಬಳಿ, ಅಮರ್ ಜವಾನ್ ಜ್ಯೋತಿ ಬಳಿ, ಪೋಸ್ಟ್ ಆಫೀಸ್ ಬಳಿ, ಬೊಳುವಾರು ಜೋಡು ರಸ್ತೆ ಬಳಿ, ಬೈಪಾಸ್ ರಸ್ತೆ ಬಳಿ, ಸುದಾನ ಶಾಲೆಯ ಎದುರು, ನೆಹರುನಗರದ ಬಳಿ, ಬನ್ನೂರು ಹಾಗೂ ಪಡೀಲುಗಳಲ್ಲಿ ಈ ಜಾಗೃತಿ ಅರಿವು ಪ್ರಸ್ತುತಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
Home ಕಾರ್ಯಕ್ರಮಗಳು ಅಂಬಿಕಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಅ. 2ರಂದು ನಗರದ ನಾನಾ ಭಾಗಗಳಲ್ಲಿ ಜಾಗೃತಿ ಕಾರ್ಯಕ್ರಮ