ವಲಯ ಮಟ್ಟದ ಕ್ರೀಡಾಕೂಟ-ಬಾಲಕಿಯರ ವಿಭಾಗದಲ್ಲಿ ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು: ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ 17ರ ವಯೋಮಾನದ  ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ  ಶಹನಿಯ 17ರ ವಯೋಮಾನದ ಬಾಲಕಿರ ವಿಭಾಗದಲ್ಲಿ 100ಮೀ 200ಮೀ.400ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 17ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಆಶ್ರಿನ ಗುಂಡು ಎಸೆತ  ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ .3000ಮೀ, 1500ಮೀ ಓಟದಲ್ಲಿ ಜಸ್ಮಿತಾ ಪ್ರಥಮ ಸ್ಥಾನ . 800ಮೀ ಓಟದಲ್ಲಿ ಅಮೃತ ದ್ವಿತೀಯ ಸ್ಥಾನ . ಕೃಪಾ ತೃತೀಯ ಸ್ಥಾನ , ಎತ್ತರ ಜಿಗಿತ ಮತ್ತು 400ಮೀ ಓಟ ದಲ್ಲಿ ನಮಿತಾ ತೃತೀಯ ಸ್ಥಾನ ,ಅಲ್ಲದೆ 17ರ ವಯೋಮಾನದ ರಿಲೇ ತಂಡ  ಶಹನಿಯ ,ಜಸ್ಮಿತ ,ಅದಿತಿ ,ನಮಿತಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. 14ರ ವಯೋಮಾನದ ರಿಲೇ ತಂಡ ಮೊಹಮ್ಮದ್. ಕೀರ್ತನ್ .ಉಸೇಯ್ದು ತೇಜಸ್  ತೃತೀಯ ಸ್ಥಾನ ಪಡೆದಿದ್ದಾರೆ. ಈ ಕ್ರೀಡಾಪಟುಗಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದೇವಿ ಪ್ರಕಾಶ್ ಶೆಟ್ಟಿ ಕುತ್ಯಾಳ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here