ಪುತ್ತೂರು: ಧರ್ಮಶ್ರೀ ಪ್ರತಿಷ್ಠಾನ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ಅ.15 ರಿಂದ 24 ರವರೇಗೆ ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಅ.15 ರಂದು ಸಂಜೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇವರಿಂದ ಭರತನಾಟ್ಯ ನೃತ್ಯಾರ್ಪಣ ನಡೆಯಲಿದೆ. ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಮಯ್ಯಾಳ ಇವರಿಂದ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಅ.16 ರಂದು ಕಾವು ಶ್ರೀ ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿಯಿಂದ ಸಂಜೆ ಭಜನೆ, ರಾತ್ರಿ ರಂಗಪೂಜೆ ಪ್ರಸಾದ ವಿತರಣೆ, ಅ.17 ರಂದು ಸಂಜೆ ಸುಳ್ಯ ಮತ್ತು ಸಜಂಕಾಡಿಯ ಭಜನಾ ತಂಡಗಳಿಂದ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, 1.18 ರಂದು ಸಂಜೆ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅ.19 ರಂದು ಸಂಜೆ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅ.20 ರಂದು ಸಂಜೆ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅ.21 ರಂದು ಸಂಜೆ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅ.22 ರಂದು ಸಂಜೆ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅ.23 ರಂದು ಸಂಜೆ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅ.24 ರಂದು ಸಂಜೆ ಸುಳ್ಯಪದವು ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ಹಾಗೂ ಅಂಬಟೆಮೂಲೆ ಮತ್ತು ಚಾರ್ವಾಕ ತಂಡಗಳಿಂದ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಜಿ.ಕೆ ಮಹಾಬಲೇಶ್ವರ ಭಟ್, ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.22: ಸಾಮೂಹಿಕ ಶ್ರೀ ಚಂಡಿಕಾ ಹವನ
ನವರಾತ್ರಿಯ ಪ್ರಯುಕ್ತ ಅ.22 ರಂದು ಬೆಳಿಗ್ಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಚಂಡಿಕಾ ಹವನವು ನಡೆಯಲಿದೆ.
ಅ.23 ರಂದು ಬೆಳಿಗ್ಗೆ ಸಾಮೂಹಿಕ ವಾಹನ ಪೂಜಾ ಕಾರ್ಯಕ್ರಮ ನಡೆಯಲಿದೆ. ಪೂಜೆ ಮಾಡಲಿಚ್ಚಿಸುವವರು ಪೂಜಾ ಸಾಮಾಗ್ರಿಗಳೊಂದಿಗೆ ವಾಹನಗಳನ್ನು ಶೃಂಗರಿಸಿ ದೇವಸ್ಥಾನದ ವಠಾರದಲ್ಲಿ ಹಾಜರಿರಬೇಕು, ಅ.24 ರಂದು ಬೆಳಿಗ್ಗೆ ಮಕ್ಕಳಿಗೆ ವಿದ್ಯಾರಂಭ ಇರುತ್ತದೆ. ಪ್ರಸಾದ ವಿತರಣೆಯ ನಂತರ ಭೋಜನ ವ್ಯವಸ್ಥೆ ಇರಲಿದೆ.