ಕಂಬಳಬೆಟ್ಟುವಿನ ಡಾ|ಅಬ್ದುಲ್ ಬಷೀರ್ ವಿ.ಕೆ. ರವರ ಮಾಲಕತ್ವದ ಹಾಸನ ಜನಪ್ರಿಯ ಆಸ್ಪತ್ರೆಯಲ್ಲಿ ಮೂಳೆ ಕ್ಯಾನ್ಸರ್‌ಗೆ ಕೃತಕ ಮೂಳೆ ಅಳವಡಿಕೆ ಯಶಸ್ವಿ ಶಸ್ತ್ರಚಿಕಿತ್ಸೆ

0

ವಿಟ್ಲ: ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಬಹಳ ಅಪರೂಪದ ಮೂಳೆ ಕ್ಯಾನ್ಸರ್‌ಗೆ ಕೃತಕ ಮೂಳೆಯ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಕಂಬಳಬೆಟ್ಟು ನಿವಾಸಿ ಹಾಸನ ಜನಪ್ರಿಯ ಆಸ್ಪತ್ರೆಯ ವೈದ್ಯ ಡಾ| ಅಬ್ದುಲ್ ಬಷೀರ್ ವಿ.ಕೆ ತಿಳಿಸಿದರು.

ಹಾಸನದಲ್ಲಿರುವ ನಮ್ಮ ಜನಪ್ರೀಯ ಆಸ್ಪತ್ರೆಗೆ ಕೆಲದಿನಗಳ ಹಿಂದೆ ಚನ್ನರಾಯ ಪಟ್ಟಣ ತಾಲೂಕಿನ 23 ವರ್ಷ ವಯಸ್ಸಿನ ಹೆಣ್ಣುಮಗಳೊಬ್ಬರು ಬಂದಿದ್ದರು. ಅವರಿಗೆ ನಡೆದಾಡಲು ತೀರಾ ತೊಂದರೆಯಾಗಿದ್ದು, ಎಡಗಾಲಿನ ತೊಡೆಯಿಂದ ಕೆಳಗೆ ಪಾದದವರೆಗೂ ಸಂಪೂರ್ಣವಾಗಿ ಊದಿಕೊಂಡು ತೊಡೆಯ ಮೂಳೆ (ನಮ್ಮ ಶರೀರದ ಅತ್ಯಂತ ದೊಡ್ಡ ಮೂಳೆ) ಶೇಕಡ 90ರಷ್ಟು ನಶಿಸಿಹೋಗಿತ್ತು. ಅವರ ದೈನಂದಿನ ಕ್ರಿಯೆಗಳು ಹಾಸಿಗೆಯಲ್ಲಿ ಮಾಡುವ ಪರಿಸ್ಥಿತಿಯಲ್ಲಿದ್ದರೂ, ಅವರು ಬೆಂಗಳೂರು ಮತ್ತು ಮಂಗಳೂರಿನಂತಹ ಮಹಾನಗರಗಳಲ್ಲಿ ಚಿಕಿತ್ಸೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚನೆ ನೀಡಿದ್ದರು. ಶಸ್ತ್ರಚಿಕಿತ್ಸೆ ನಡೆಸಿದರೂ ಶೇಕಡ 80ರಷ್ಟು ಯಶಸ್ವಿಯಾಗುವುದು ಕಷ್ಟ. ಮಾತ್ರವಲ್ಲ ಕಾಲನ್ನು ತೆಗೆಯುವ ಪರಿಸ್ಥಿತಿ ಬರಬಹುದೆಂದು ಅವರು ತಿಳಿಸಿದ್ದರು.

ಆದರೆ ಅವರ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಶಸ್ತ್ರಕ್ರೀಯೆ ನಡೆಸುವುದು ಬಹಳ ಕಷ್ಟದ ವಿಚಾರವಾಗಿತ್ತು.
ಬಳಿಕದ ದಿನಗಳಲ್ಲಿ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ಬಂದಂತಹ ಸಂದರ್ಭದಲ್ಲಿ ಅವರನ್ನು ಪರೀಕ್ಷಿಸಿದ ಕೀಲು ಮತ್ತು ಮೂಳೆ ತಜ್ಞನಾದ ನಾನು ಮತ್ತು ಡಾ.ರಾಜತ್ ಕ್ಷಕಿರಣ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ಕಾಲಿನ ತೊಡೆ ಭಾಗದ ಮೂಳೆಗೆ ಕ್ಯಾನ್ಸರ್ ಆಗಿ ಸಂಪೂರ್ಣ ವಾಗಿ ತಿಂದು ಹಾಕಿತ್ತು, ಅವರಿಗೆ ಹಾಸನದಲ್ಲಿ ಹಿಂದೆಂದೂ ಮಾಡದಂತಹ ವಿಶೇಷವಾದ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇತ್ತು. ಹಾಗಾಗಿ ಮೂಳೆಯನ್ನು ತೆಗೆದು ಕೃತಕ ಮೂಳೆ ಜೋಡಣೆ ಮಾಡಲಾಯಿತು. ಸುಮಾರು ಎಂಟು ಗಂಟೆಗಳ ಕಾಲ ತಜ್ಞವೈದ್ಯರಾದ ಡಾ.ವಿ.ಕೆ ಅಬ್ದುಲ್ ಬಶೀರ್, ಡಾ.ರಜತ್, ಡಾ.ಲಿಂಗರಾಜ್, ಡಾ.ನವನೀತ್ ತಂಡದ ಪರಿಶ್ರಮದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಯಿತು. ಇದು ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೃತಕ ಮೂಳೆಯ ಜೋಡಣೆ ಕಾರ್ಯವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಗಾಯಾಳು ಎರಡೇ ದಿನಕ್ಕೆ ನಡೆಯಲು ಆರಂಭಿಸಿದರು. ಗಾಯಾಳು ಈ ಹಿಂದೆ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು ಎರಡು ವರ್ಷಗಳ ಕಾಲ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಇದೀಗ ಶಸ್ತ್ರಚಿಕಿತ್ಸೆಯ ಬಳಿಕ ಮತ್ತೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ವಿ.ಕೆ.ಬಶೀರ್ ತಿಳಿಸಿದರು.

LEAVE A REPLY

Please enter your comment!
Please enter your name here