





ಅಧ್ಯಕ್ಷ ಚಿದಾನಂದ ಬಜಪ್ಪಾಳ, ಕಾರ್ಯದರ್ಶಿ ಸಂಪ್ರೀತ್ ಕಡ್ಯ


ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮುಂಡೂರು ವಲಯಾದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಶಾಂತಿಗೋಡು, ಕುರಿಯಾ ಮುಂಡೂರು, ಸರ್ವೆ, ನರಿಮೊಗರು ಗ್ರಾಮಗಳನ್ನೊಳಗೊಂಡ ಮುಂಡೂರು ವಲಯಾದ ಪದಾಧಿಕಾರಿಗಳ ಆಯ್ಕೆಯು ನ.23ರಂದು ಮುಂಡೂರು ಹಾಲಿನ ಸೊಸೈಟಿಯ ಸಭಾಭವನದಲ್ಲಿ ನಡೆಯಿತು.






ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಗ್ಲಿಮನೆ, ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಅಧ್ಯಕ್ಷ ರಾಧಾಕೃಷ್ಣ ನಂದಿಲ, ಯುವ ಒಕ್ಕಲಿಗ ಗೌಡ ಸೇವಾ ಅಧ್ಯಕ್ಷ ಅಮರನಾಥ ಬಪ್ಪಳಿಗೆ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಮುಂಡೂರು ವಲಯಾದ ಗೌರವ ಅಧ್ಯಕ್ಷ ಮೋಹನ್ ಗೌಡ ಪಾದೆ, ಮುಂಡೂರು ವಲಯದ ಯುವ ಅಧ್ಯಕ್ಷ ಚೆನ್ನಪ್ಪ ಗೌಡ, ಮೋಹನ್ ಗೌಡ ನಡುಬೈಲು, ಭಾರತಿ ಕಾಡಮನೆ ಅವರ ಮುಂದಾಳತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಚಿದಾನಂದ ಬಜಪ್ಪಾಳ, ಕಾರ್ಯದರ್ಶಿಯಾಗಿ ಸಂಪ್ರೀತ್ ಕಡ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಗುರುಪ್ರಸಾದ್ ವಾಲ್ತಜೆ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮೋಹನ್ ಗೌಡ ಪಾದೆ, ನಿಕಟಪೂರ್ವ ಅಧ್ಯಕ್ಷರಾಗಿ ಚೆನ್ನಪ್ಪ ಗೌಡ ಕೋಲಾಡಿ, ಉಪಾಧ್ಯಕ್ಷರುಗಳಾಗಿ ಜಯರಾಮ ಗೌಡ ಪಾರ್ಪಾಜೆ ಕುಕ್ಯಾನ, ಜಯರಾಮ ಗೌಡ ಸೇರಾಜೆ, ಚೆನ್ನಪ್ಪ ಗೌಡ ತೌಡಿಂಜ, ಕೋಶಾಧಿಕಾರಿಯಾಗಿ ಹರೀಶ್ ಗೌಡ ಕರ್ಬಂಡ್ಕ, ಜೊತೆ ಕಾರ್ಯದರ್ಶಿಯಾಗಿ ವಿನೋದ್ ಗೌಡ ಓಲಾಡಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರೇಷ್ಮಾ ಚೆನ್ನಪ್ಪ ಗೌಡ, ಕೋಲಾಡಿ, ಗೋಪಾಲ ಗೌಡ ಕರೆಜ್ಜ, ವಲಯ ಉಸ್ತುವಾರಿಯಾಗಿ ರಮೇಶ್ ಗೌಡ ಪಜಿಮಣ್ಣು ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಇತ್ತಿಚೆಗೆ ದೀಪಾವಳಿ ಹಬ್ಬದ ಪ್ರಯಕ್ತ ನಡೆದ ತುಳಸಿ ಕಟ್ಟೆ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುತ್ತೂರು ತಾಲೂಕು ಯುವ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ನಿಯೋಜಿತ ಕಾರ್ಯದರ್ಶಿ ಗುರುರಾಜ್ ಹಿರೆಬಂಡಾಡಿ, ಬನ್ನೂರು ವಲಯದ ಅಧ್ಯಕ್ಷ ಮೋಹನ್ ಕಬಕ, ಪ್ರಕಾಶ್ ಕೆಮ್ಮಾಯಿ ಶೇಖರ್ ಬನ್ನೂರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಮುಂಡೂರು ವಲಯಾದ ಕಾರ್ಯದರ್ಶಿ ವರುಣ್ ಗೌಡ ಓಲಾಡಿ ಕಾರ್ಯಕ್ರಮ ನಿರೂಪಿಸಿದರು.







