





ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಕಿರಿಯ ಪ್ರಾಥಮಿಕ ವಿಭಾಗದ ಸದೃಶ- ಕ್ರೀಡಾ ಸಂಭ್ರಮ ನಡೆಯಿತು.



ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಸಕ್ತ ವರ್ಷದ ವಿವಿಧ ಕ್ರೀಡಾ ಕ್ಷೇತ್ರದ ಸಾಧಕರು ಅಭ್ಯಾಗತರಾಗಿ ಉಪಸ್ಥಿತರಿದ್ದರು. ಶಾಲಾ ‘ಏಕಲವ್ಯ’ ಕ್ರೀಡಾ ಸಂಘದ ಸದಸ್ಯ ಮಕ್ಕಳ ಆಯೋಜನೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗೆ 12ಕ್ಕಿಂತಲೂ ಹೆಚ್ಚಿನ ವೈಯಕ್ತಿಕ ಹಾಗೂ ೭ ವಿಭಾಗದಲ್ಲಿ ಗುಂಪು ಸ್ಪರ್ಧೆಗಳನ್ನು ನಡೆಸಲಾಯಿತು.





ಶಾಲಾ ರಾಷ್ಟ್ರೀಯ ಕ್ರೀಡಾಪಟು ಜಿ.ಎಂ ಕೀರ್ತಿ ದೀಪ ಬೆಳಗಿಸಿ “ಬಾಲ್ಯದಿಂದಲೇ ನನ್ನಲ್ಲಿ ಕ್ರೀಡಾಸಕ್ತಿಯಿದ್ದು, ಅದನ್ನು ಪೋಷಿಸಿ ಬೆಳೆಸುವ ಕಾರ್ಯ ನಮ್ಮೀ ಕನ್ನಡ ಶಾಲೆಯಿಂದ ಆಗಿದೆ ಮುಂದೆ ನಿಮ್ಮ ಕ್ರೀಡಾಸಕ್ತಿಯನ್ನು ಬೆಳೆಸಿ ಸಾಧನೆಯಲ್ಲಿ ತೊಡಗಿಕೊಳ್ಳಬೇಕು” ಎಂದು ಹೇಳಿದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರತೀಕ್ಷಾ ಇವರು ಪ್ರತಾಪ್, ತಿಲಕ್, ಸುಭಾಷ್, ಶಿವಾಜಿ ಪತಾಕಾ ತಂಡಗಳಿಂದ ವಂದನೆ ಸ್ವೀಕರಿಸಿ ಶುಭ ಹಾರೈಸಿದರು.
ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಎಂ, ಪ್ರೌಢವಿಭಾಗದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಶಾಲಾ ಘೋಷ್ ತಂಡವು ವಿವಿಧ ತಂಡಗಳನ್ನು ಮುನ್ನಡೆಸಿತು. ವಿದ್ಯಾರ್ಥಿನಿ ಕು. ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ತೃಷಾ ಸ್ವಾಗತಿಸಿ, ಗುಣಶ್ರೀ ಧನ್ಯವಾದ ಸಮರ್ಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಹಾಗೂ ನಮಿತಾ ಇವರು ಸಂಯೋಜಕರಾಗಿ ಮಾರ್ಗದರ್ಶನ ನೀಡಿದರು.









