ಪುತ್ತೂರು: ಪುತ್ತೂರು ಲಯನ್ಸ್ ಕ್ಲಬ್ ಸ್ಥಾಪಕರ ದಿನಾಚರಣೆ ಮತ್ತು ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮವು ಅ.10 ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಚಾರ್ಟರ್ ನೈಟ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲೆಯ ಎರಡನೇ ಉಪ ರಾಜ್ಯಪಾಲ ಲ| ಕುಡ್ಪಿ ಅರವಿಂದ ಶೆಣೈ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತೂರು ಕ್ಲಬ್ ಚಾರ್ಟರ್ ಸದಸ್ಯ ಹಿರಿಯ ನ್ಯಾಯವಾದಿ, ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ ಚಾರ್ಟರ್ ಶುಭ ನುಡಿದರು.
ಗೌರವ:
ಕಾರ್ಯಕ್ರಮದಲ್ಲಿ ಪುತ್ತೂರು ಕ್ಲಬ್ ಚಾರ್ಟರ್ ಸದಸ್ಯ ಹಿರಿಯ ನ್ಯಾಯವಾದಿ, ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ , ಉಪ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಮತ್ತು ವಲಯಾಧ್ಯಕ್ಷ ಪವನ್ರಾಮ್ ,ಇರ್ವರು ಶಿಕ್ಷಕಿಯರಿಗೆ ಗೌರವಿಸಲಾಯಿತು.ಶೈಕ್ಷಣಿಕ ನೆರವು ಅಂಗವಾಗಿ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗ ಜೀವಿತರಿಗೆ ರೂ.5000 ಧನ ಸಹಾಯ ನೀಡಲಾಯಿತು.
ವಲಯಾಧ್ಯಕ್ಷ ಪವನ್ರಾಮ್ ವಲಯದ ಕ್ಲಬ್ಗಳ ಎಡ್ವೈಸರಿ ಕಮಿಟಿ ಸಭೆ ನಡೆಸಿ ಕ್ಲಬ್ಗಳ ವರದಿ ಪಡೆದು ಪ್ರಮಾಣ ಪತ್ರ ನೀಡಿದರು.ಕಾರ್ಯದರ್ಶಿ ಎಂ.ಜಿ.ರಝಾಕ್ ವರದಿ ವಾಚಿಸಿದರು.
ನೂತನ ಸದಸ್ಯರಾಗಿ, ಜ್ಯೋತಿಷಿ ಶ್ರೀಪತಿ ಭಟ್, ಕಲಾವಿದ ದಯಾನಂದ ರೈ ಬೆಟ್ಟಂಪಾಡಿ, ಸುಧಾಕರ ಕೆ.ಪಿ. ಮತ್ತು ನಳಿನಿ ಲಕ್ಷ್ಮಣ್ ಇವರನ್ನು ಗವರ್ನರ್ ಪ್ರಮಾಣ ವಚನ ಭೋಧಿಸಿ ಪುತ್ತೂರು ಕ್ಲಬ್ಗೆ ಬರಮಾಡಿಕೊಂಡರು. ಕೃಷ್ಣ ಪ್ರಶಾಂತ್, ಅರವಿಂದ ಭಗವಾನ್ ರೈ, ಆನಂದ ರೈ, ವತ್ಸಲ ರಾಜ್ನಿ, ಜಯಶ್ರೀ ಶೆಟ್ಟಿ, ಗಣೇಶ್ ಶೆಟ್ಟಿ ಕೆ, ಜಯಶ್ರೀ ನಾಯ್ಕ್, ಪ್ರೇಮಲತಾ ರಾವ್, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.ವೇದಿಕೆಯಲ್ಲಿ ವಲಯದ ಕ್ಲಬ್ಗಳಾದ,ಪುತ್ತೂರು ಕಾವು, ಪುತ್ತೂರು ಪಾಣಾಜೆ, ಆಲಂಕಾರು ದುರ್ಗಾಂಭ ಇದರ ಅಧ್ಯಕ್ಷ, ವಲಯಾಧ್ಯಕ್ಷ ಲನ್ಸಿ ಮಸ್ಕರೇನ್ಹಸ್ ಮತ್ತು ಆಲಂಗಾರು ದುರ್ಗಾಂಬ ಕ್ಲಬ್ ಸ್ಥಾಪಕಾಧ್ಯಕ್ಷ ದಯಾನಂದ ರೈ ಮನವಳಿಕೆ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಸದಾಶಿವ ಸ್ವಾಗತಿಸಿ, ಕಾರ್ಯದರ್ಶಿ ಎಂ.ಜಿ.ರಝಾಕ್ ವಂದಿಸಿದರು.