ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ನೇತೃತ್ವದಲ್ಲಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದಲ್ಲಿ
ಮೂರು ದಿನಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಯ ‘ಆಧಾರ್ ಮೇಳ’ ಕಾರ್ಯಕ್ರಮ ಭಕ್ತಕೋಡಿಯ ಶ್ರೀ ವರಲಕ್ಷ್ಮೀ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಯುವಕ ಮಂಡಲದ ಗೌರವಾಧ್ಯಕ್ಷ ವಸಂತ್ ಎಸ್.ಡಿ ಸರ್ವೆದೋಳಗುತ್ತು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಭಾರತೀಯ ಅಂಚೆ ಇಲಾಖೆಯ ಯತಿರಾಜ್ ಅಧಾರ್ ಮೇಳ ಕಾರ್ಯಕ್ರಮ ಹಾಗೂ ಅಂಚೆ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಆಧಾರ್ ಮೇಳದಲ್ಲಿ ಮೂರು ದಿನಗಳ ಕಾಲ ಉತ್ತಮ ಸೇವೆ ನೀಡಿದ ಭಾರತೀಯ ಅಂಚೆ ಇಲಾಖೆಯ ಯತಿರಾಜ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಗೌತಮ್ ರಾಜ್ ಕರುಂಬಾರು ಸ್ವಾಗತಿಸಿ, ವಂದಿಸಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮನೋಜ್ ಸುವರ್ಣ ಸೊರಕೆ,ಗೌರವ ಸಲಹೆಗಾರ ಶ್ರೀನಿವಾಸ್ ಎಚ್ ಬಿ, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ. ಶರೀಫ಼್ ಸರ್ವೆ,ಮುಂಡೂರು ಪಂಚಾಯತ್ ಸದಸ್ಯರಾದ ಕಮಲೇಶ್ ಎಸ್.ವಿ. , ಯುವಕ ಮಂಡಲದ ಹಿರಿಯ ಸದಸ್ಯ ವಸಂತ್ ಪೂಜಾರಿ ಕೈಪಂಗಲದೋಲ, ಊರ ಹಿರಿಯರು, ಗ್ರಾಮಸ್ಥರು , ಭಾರತೀಯ ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.