ದಸರಾ ವೈಟ್‌ ಲಿಫ್ಟಿಂಗ್‌ ಸ್ಪರ್ಧೆ- 73 ಕೆ.ಜಿ ವಿಭಾಗದಲ್ಲಿ ಪ್ರಜ್ವಲ್‌ ಗೆ ಚಿನ್ನ

0

ಪುತ್ತೂರು: ಮೈಸೂರು ದಸರಾ ಪ್ರಯುಕ್ತ ನಡೆದ ರಾಜ್ಯ ಮಟ್ಟದ ವೈಟ್‌ ಲಿಫ್ಟಿಂಗ್‌ ಮತ್ತು ದಸರಾ ಸಿಎಂ ಕಪ್‌ ಸ್ಪರ್ಧೆಯಲ್ಲಿ 73 ಕೆ.ಜಿ ವಿಭಾಗದಲ್ಲಿ ಕಡಬ ತಾಲೂಕು ಚಾರ್ವಾಕ ನಿವಾಸಿ ಪ್ರಜ್ವಲ್‌ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕಳೆದ 3 ವರ್ಷಗಳಿಂದ ಸತತವಾಗಿ ಈ ಪ್ರಶಸ್ತಿ ಗಳಿಸುತ್ತಿರುವ ಪ್ರಜ್ವಲ್‌ ಉಜಿರೆ ಎಸ್‌ ಡಿ ಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಒಡಿಶಾದಲ್ಲಿ ನಡೆದ ರಾಷ್ಟ್ರಮಟ್ಟದ ವೈಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಚಂದ್ರಶೇಖರ್ ಹಾಗೂ ಸಾವಿತ್ರಿ ದಂಪತಿಗಳ ಪುತ್ರನಾಗಿರುವ ಇವರು ಒಟ್ಟು 280 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆಯುವುದರ ಜೊತೆಗೆ ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿಗೂ ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here