ನಾಳೆ(ಅ.31): ಸಂತ ಫಿಲೋಮಿನಾ ಕಾಲೇಜಿನ ಆಡಳಿತ ಸಿಬ್ಬಂದಿ ರಾಬರ್ಟ್‌ ಮೊಂತೆರೋ ಸೇವಾನಿವೃತ್ತಿ

0

ಪುತ್ತೂರು: ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕಛೇರಿ ಸಹಾಯಕರಾಗಿ ಕಳೆದ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಬರ್ಟ್‌ ಮೊಂತೆರೋ ಅವರು ನಾಳೆ(ಅ.31)ರಂದು ಸೇವಾನಿವೃತ್ತಿ ಹೊಂದಲಿರುವರು.

ಇವರು 27.10.1963 ರಂದು ಪುತ್ತೂರಿನಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ದರ್ಬೆಯ ಲಿಟ್ಲ್‌ ಫ್ಲವರ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ದಿನಾಕ 10-01-1981 ರಂದು ಸಂತ ಫಿಲೋಮಿನಾ ಕಾಲೇಜಿನ ಆಡಳಿತ ಕಛೇರಿಗೆ ಸಹಾಯಕರಾಗಿ ಸೇವೆಯನ್ನು ಪ್ರಾರಂಭಿಸಿರುತ್ತಾರೆ.

ಮರೀಲ್‌ ನಿವಾಸಿ ದಿ. ಫ್ರಾನ್ಸಿಸ್‌ ಮೊಂತೆರೋ ಹಾಗೂ ಜಿಯಾನ್ನ ಡಲ್ಮೇದರವರ ಪುತ್ರರಾದ ಇವರು ಮಾಯ್‌ ದೆ ದೇವುಸ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾದ ಪತ್ನಿ ಫ್ಲೋರಿನ್‌ ಡಯಾಸ್‌, ಪುತ್ರರಾದ ಅಜಯ್‌ ಮೊಂತೆರೋ ಹಾಗೂ ವಿಜಯ್‌ ಮೋತೆರೋ ಮತ್ತು ಪುತ್ರಿ ಕ್ಲಿಯೋನರೊಂದಿಗೆ ಪುತ್ತೂರಿನ ಮರೀಲಿನಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇವರ ನಿವೃತ್ತ ಜೀವನವು ಸುಖ, ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಕಾಲೇಜಿನ ಸಂಚಾಲಕರು, ಪ್ರಾಂಶುಪಾಲರು, ಆಡಳಿತಮಂಡಳಿಯ ಸದಸ್ಯರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here