ಪುತ್ತೂರು: ಮೂಡಬಿದರೆಯ ಆಳ್ವಾಸ್ ಕ್ರೀಡಾಂಗಣದಲ್ಲಿ ನಡೆದ 2023-24ರ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಒಟ್ಟು ಆರು ವಿಭಾಗದಲ್ಲಿ ಐದು ವಿಭಾಗದಲ್ಲಿಯೂ ಪುತ್ತೂರು ತಾಲೂಕು ಸಮಗ್ರ ಚಾಂಪಿಯನ್ ಪಡೆದುಕೊಂಡಿದೆ.
ಒಟ್ಟು ಆರು ವಿಭಾಗದಲ್ಲಿ ನಡೆದ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗ, 14 ವರ್ಷದ ಬಾಲಕಿಯ ವಿಭಾಗ ಹಾಗೂ 17 ವರ್ಷದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರತಿನಿಧಿಸಿದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ಚಾಂಪಿಯನ್ ಪಡೆದುಕೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮಾತ್ರ ಮಂಗಳೂರು ಉತ್ತರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
4 ಕೂಟ ದಾಖಲೆ:
ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಕೂಟ ದಾಖಲೆ ನಿರ್ಮಾಣವಾಗಿದ್ದು 4 ದಾಖಲೆಯನ್ನು ಪುತ್ತೂರು ತಾಲೂಕು ಮಾಡಿದೆ. ಕಡಬ ಸ.ಪ.ಪೂ ಕಾಲೇಜಿನ ಚರಿಷ್ಮಾ 1500 ಮೀ, 3000ಮೀಟರ್ ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮದ ದಿವಿಜ್ಞಾ 600 ಮೀ. ಓಟದಲ್ಲಿ ಹಾಗೂ ರಿಲೇಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮದ ಗುಣಶ್ರೀ ಮತ್ತು ಕನಿಷ್ಟ ಅಂತದಲ್ಲಿ ಪೂರ್ಣಗೊಳಿಸುವ ಮೂಲಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಐತಿಹಾಸಿಕ ಕೂಟ ದಾಖಲೆ ನಿರ್ಮಿಸಿದ್ದಾರೆ. ಪುತ್ತೂರು ತಾಲೂಕಿನಿಂದ ಭಾಗವಹಿಸಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕಡಬ ಸ.ಪ.ಪೂ ಕಾಲೇಜು, ಹಳೆನೇರಂಕಿ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡುವ ಮೂಲಕ ಸಮಗ್ರ ಚಾಂಪಿಯನ್ ಪಡೆದುಕೊಂಡಿದೆ.
3 ವೈಯಕ್ತಿಕ ಚಾಂಪಿಯನ್:
ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮದ ದಿವಿಜ್ಞಾ, ಕಡಬ ಸ.ಪ.ಪೂ ಕಾಲೇಜಿನ ಚರಿಷ್ಮಾ, ಹಳೆನೇರಂಕಿ ಹಿ.ಪ್ರಾ ಶಾಲಾ ಜಯೇಶ್ ರವರು ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಸುಂದರ ಗೌಡ, ವಿವಿಧ ಶಾಲೆಗಳ ದೈಹಿಕ್ಷ ಶಿಕ್ಷಣ ಶಿಕ್ಷಕರು ಪ್ರಶಸ್ತಿ ಸ್ವೀಕರಿಸಿದರು.
ಮುಂದಿನ ವರ್ಷ ಪುತ್ತೂರಿನಲ್ಲಿ:
2024-25ರ ಜಿಲ್ಲಾ ಮಟ್ಟದ ಕ್ರೀಡಾಕೂಟವು ಪುತ್ತೂರಿನ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಆತಿಥ್ಯದಲ್ಲಿ ನಡೆಯಲಿದ್ದು ಕಾಲೇಜಿನ ಕಾರ್ಯಧ್ಯಕ್ಷ ಜೋಕಿಂ ಡಿ’ಸೋಜ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ ಧ್ವಜ ಸ್ವೀಕರಿದರು.