ನೆಲ್ಯಾಡಿ:ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ವಾಣಿಜ್ಯ ಸಂಘವನ್ನು ಸೇಕ್ರೆಡ್ ಹಾರ್ಟ್ ಕಾಲೇಜಿನ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಈಶ್ವರ ಗೌಡ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ “ಹೂಡಿಕೆಯ ಅವಕಾಶಗಗಳು” ವಿಷಯದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಹೂಡಿಕೆಯ ವಿವಿಧ ವಿಧಾನಗಳು, ನಷ್ಟ ಮತ್ತು ಗಳಿಕೆಯ ಸಮತೋಲನ, ಭವಿಷ್ಯದಲ್ಲಿ ಹೂಡಿಕೆದಾರರ ಅಳಿವು ಮತ್ತು ಉಳಿವು, ಉಳಿತಾಯ ಮಾಡುವುದರ ಪ್ರಯೋಜನಗಳು ಇತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸಿದರು.
ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೆರೋನಿಕಾ ಪ್ರಭ ಪ್ರಾಸ್ತಾವಿಕ ನುಡಿಗಳ್ನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹಸಂಯೋಜಕ ಡಾ! ಸೀತಾರಾಮ ಬರವಣಿಗೆಯನ್ನು ಹೂಡಿಕೆಯನ್ನಾಗಿಸಿಕೊಂಡು ಯಶಸ್ವಿಯಾದವರ ಬದುಕಿನ ಚಿತ್ರಣವನ್ನು ವಿವರಿಸಿ ಹೂಡಿಕೆದಾರರು ಸರಿಯಾದ ಗುರಿಯನ್ನು ಹೊಂದಿರಬೇಕು ಎಂದು ವಿವರಿಸಿದರು.
ಕಾರ್ಯಕ್ರಮ ಆಯೋಜಕಿ ಪಾವನ ಸ್ವಾಗತಿಸಿ,.ವಿದ್ಯಾರ್ಥಿನಿ ಯಕ್ಷಿತ ವಂದಿಸಿ, ನುಸ್ರೀಲ್ ಕಾರ್ಯಕ್ರಮ ನಿರೂಪಿಸಿದರು.