ಪುತ್ತೂರು: ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಜ್ಯ ವ್ಯಾಪಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 19ನೇ ಶಾಖೆಯು ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ಶೃತಿ ಟವರ್ಸ್ನ 2ನೇ ಮಹಡಿಯಲ್ಲಿ ನ.10ರಂದು ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಣದ ಕೈಗಳ ರೀತಿಯಲ್ಲಿ ದೇಶದ ಆರ್ಥಿಕ ಕ್ಷೇತ್ರಕ್ಕೆ ಸಹಕಾರ ಕ್ಷೇತ್ರವು ತನ್ನ ಕೊಡುಗೆಯನ್ನು ನೀಡುತ್ತಿದೆ. ಮುಡಿಪುನಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ ಎಂಬುದನ್ನು ಗಮನಿಸಿ ಎಲ್ಲಾ ಆರ್ಥಿಕ ಸಂಸ್ಥೆಗಳು ಇಲ್ಲಿ ಶಾಖೆಗಳನ್ನು ತೆರೆಯುತ್ತಿದೆ, ಸೌಹಾರ್ದಮಯ ವಾತಾವರಣ ಇದ್ದಾಗ ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ಅಭಿವೃದ್ಧಿಯಾಗಲು ಸಾಧ್ಯ, ವಿಧಾನ ಪರಿಷತ್ ನಲ್ಲಿ ಸಹಕಾರ ಕ್ಷೇತ್ರಕ್ಕೆ ಪ್ರಾತಿನಿದ್ಯವನ್ನು ನೀಡುವಲ್ಲಿ ಪಯತ್ನಿಸಲಾಗುವುದು. ಸಹಕಾರಿಯು ಮುಂದಿನ 10 ವರ್ಷಗಳಲ್ಲಿ 50ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಲಿ. ಮಂಗಳೂರು ಇದರ ನಿರ್ದೇಶಕ ಟಿ ಜಿ ರಾಜರಾಮ್ ಭಟ್ ಕ್ಯಾಂಪ್ಕೋ ಲಿ. ಮಂಗಳೂರಿನ ನಿರ್ದೇಶಕ ಮಹೇಶ್ ಚೌಟ, ದ.ಕ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್. ICAI ಮಂಗಳೂರಿನ ಮಾಜಿ ಅಧ್ಯಕ್ಷ. S S ನಾಯಕ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರಿನ ನಿರ್ದೇಶಕಿ ಭಾರತಿ ಜಿ ಭಟ್, ಕುರ್ನಾಡು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಲೋಲಾಕ್ಷಿ ಶೆಟ್ಟಿ, ಶ್ರೀ ಗೋಪಾಲ ಕೃಷ್ಣ ದೇವರ ಟ್ರಸ್ಟ್ ಅಮ್ಮೆಂಬಳ ಇದರ ಟ್ರಸ್ಟಿ ನಾಗೇಶ್ ಕಾಮತ್ ಅಮ್ಮೆಂಬಳ ಭಾಗವಹಿಸಿ ನೂತನ ಶಾಖೆಗೆ ಶುಭ ಹಾರೈಸಿದರು.
ಸಹಕಾರಿ ಸಂಘದ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಹಾಗೂ ಆಡಳಿತ ಮಂಡಲಿಯ ಹಾಲಿ ಹಾಗೂ ಮಾಜಿ ಸದಸ್ಯರು ಸಿಬ್ಬಂದಿವರ್ಗದವರು ಸಹಕಾರಿ ಗ್ರಾಹಕರು ಉಪಸ್ಥಿತರಿದ್ದರು. 2024ರ ಸಹಕಾರಿ ಸಂಘದ ಕ್ಯಾಲೆಂಡರ್ ನ್ನು ಯು ಟಿ ಖಾದರ್ ಬಿಡುಗಡೆಗೊಳಿಸಿದರು. ಶ್ರೀ ರಂಜಿತಾ ಪ್ರಾರ್ಥಿಸಿದರು, ಮುಡಿಪು ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ಕೆ ವಂದನಾರ್ಪಣೆಗೈದರು ಶಿವಪ್ರಸಾದ್ ಟಿ ನಿರೂಪಿಸಿದರು.
ನೂತನ ಶಾಖೆಯ ಶುಭಾರಂಭದ ಪ್ರಯುಕ್ತ 1000 ದಿನಗಳ ವಿಶೇಷ ಠೇವಣಿಗೆ 9.10% ಹಾಗೂ 1 ವರ್ಷ ಅವಧಿ ಠೇವಣಿಗೆ 8.80%, ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ವಿಧವೆಯರಿಗೆ ಮತ್ತು ಯೋಧರಿಗೆ ಮತ್ತು ನೋಂದಾಯಿತ ಸಂಘ ಸಂಸ್ಥಗಳಿಗೆ 1000 ದಿನಗಳಿಗೆ 9.50% ಹಾಗೂ 1 ವರ್ಷ ಅವಧಿ ಠೇವಣಿಗೆ 9.20% ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ, ಅಟೋ ಸಾಲ, ಗೃಹ ಸಾಲ, ಭೂ ಅಡಮಾನ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತದೆ.