ಸುಬ್ರಹ್ಮಣ್ಯ: ಆಂಜನೇಯ ಗುಡಿಯಿಂದ ಕಳವಿಗೆ ಯತ್ನ

0

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಆಂಜನೇಯ ಗುಡಿಗೆ ಗುರುವಾರ ರಾತ್ರಿ ವ್ಯಕ್ತಿಯೊಬ್ಬ ನುಗ್ಗಿದ್ದು, ಮೊದಲಿಗೆ ಕಳ್ಳತನ ಕೃತ್ಯ ನಡೆದಿದೆ ಎನ್ನಲಾದ ಹಾಗೂ ಯಾವುದೇ ಕಳ್ಳತನ ನಡೆಯದೇ ಇರುವ ಬಗ್ಗೆ ಶುಕ್ರವಾರ ಬೆಳಕಿಗೆ ಬಂದಿದೆ.


ಸುಬ್ರಹ್ಮಣ್ಯದ ಆಂಜನೇಯ ಗುಡಿಗೆ ಗುರುವಾರ ರಾತ್ರಿ ವ್ಯಕ್ತಿಯೊಬ್ಬ ನುಗ್ಗಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಇದರಿಂದ ಕಳ್ಳತನ ಆಗಿರಬಹುದುದೆಂಬ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಲಾಗಿತ್ತು, ಸುಬ್ರಹ್ಮಣ್ಯ ಎಸೈ ಕಾರ್ತಿಕ್ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಆಗಂತುಕನೊಬ್ಬ ರಾತ್ರಿ ವೇಳೆ ಗೇಟು ದಾಟಿ ಕಳ್ಳತನ ಮಾಡಲು ಯತ್ನಿಸಿದ್ದು, ಯಾವುದೇ ಕಳ್ಳತನ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here