





ನೆಲ್ಯಾಡಿ: ಬಜತ್ತೂರು ತುಳುನಾಡ ತುಡರ್ ವಾಟ್ಸಾಪ್ ಗ್ರೂಪ್‌ನ ಎರಡನೇ ವರ್ಷದ ಧನಸಹಾಯ ಕೂಪನ್ ಡ್ರಾ ಕಾರ್ಯಕ್ರಮದಲ್ಲಿ ನಿಯೋಜಿಸಿದ 13ನೇ ಯೋಜನೆಯಾದ ಅಶಕ್ತ ಕುಟುಂಬಗಳಿಗೆ ಕಿಟ್ ವಿತರಣೆಯಡಿ ಪುತ್ತೂರಿನ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮ ಮಾನಸಿಕ ವಿಕಲಚೇತನ ವೃತ್ತಿ ತರಬೇತಿ ಪುನರ್ವಸತಿ ಕೇಂದ್ರಕ್ಕೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಸಮಿತಿಯ ಸದಸ್ಯರಾದ ಮನೋಜ್, ದಯಾನಂದ, ಮಮತಾ, ನಯನ, ಭವ್ಯ, ಸುಜಾತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












