ಕೈಕಾರ ಸರ್ವಶಕ್ತಿ ಯುವಕಮಂಡಲ 27ನೇ ವಾರ್ಷಿಕೋತ್ಸವ ಸಮಾರಂಭ

0

ಯುವಕರು ಕತ್ತಿ, ದೊಣ್ಣೆ ಹಿಡಿದು ಡಾನ್ ಆಗುವ ಬದಲು ಸಮಾಜಮುಖಿ ಕೆಲಸ ಮಾಡಿ: ಸಮಾಜಘಾತುಕರಿಗೆ ಶಾಸಕರ ಖಡಕ್ ಎಚ್ಚರಿಕೆ

ಪುತ್ತೂರು: ಪುತ್ತೂರಿನಲ್ಲಿ ಕಳೆದ ಕೆಲವು ದಿನಗಳಿಂದ ಕೆಲವೊಂದು ಮಂದಿ ಯುವಕರು ಕತ್ತಿ, ದೊಣ್ಣೆ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಮಾಡಿ ಡಾನ್ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ಆ ಕೆಲಸವನ್ನು ಬಿಟ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಮಾಜಘಾತುಕ ಶಕ್ತಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರು ಕೈಕಾರ ಸರ್ವಶಕ್ತಿ ಯುವಕಮಂಡಲದ 27ನೇ ವಾರ್ಷಿಕ ಸಮಾರಂಭದಲ್ಲಿ ಸಂಘಟನೆಯ ಕರ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು. ಯುವ ಶಕ್ತಿ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ಧತೆಗೆ ಯುವಕರು ಕಾರಣರಾಗಬೇಕು. ಕೈಕಾರದ ಸರ್ವಶಕ್ತಿ ಯುವಕಮಂಡಲದ ಕಾರ್ಯಕರ್ತರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ. ಕೆಟ್ಟ ಕೆಲಸಗಳಿಗೆ ಯುವ ಸಮೂಹ ಎಂದೂ ಹೋಗಬಾರದು ಮತ್ತು ಕೆಟ್ಟ ಚಟಗಳಿಗೂ ಬಲಿಯಾಗಬಾರದು. ಕತ್ತಿ, ತಲವಾರು ಹಿಡಿದು ರಸ್ತೆಯಲ್ಲಿ ಓಡಾಡಿದ ಮಾತ್ರಕ್ಕೆ ಅವನೇನು ಇಲ್ಲಿ ಡಾನ್ ಆಗಲು ಸಾಧ್ಯವಿಲ್ಲ, ಇಲ್ಲಿ ಕಾನೂನು ಇದೆ ಸಮಾಜಘಾತುಕರ ಹೆಡೆಮುರಿ ಕಟ್ಟುವ ಕೆಲಸವನ್ನು ಇಲ್ಲಿ ಕಾನೂನು ಮಾಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ, ಯುವ ಸಂಘಟನೆಗಳು ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಊರಿನವರ ಆಶೀರ್ವಾದವನ್ನು ಪಡೆಯುವವರಾಗಬೇಕು. ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದರೆ ಮಾತ್ರ ಜನ ನಮ್ಮನ್ನು ಗೌರವಿಸುತ್ತಾರೆ. ಕೈಕಾರದ ಸರ್ವಶಕ್ತಿ ಯುವಕ ಮಂಡಲ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಮಂಗಳೂರು ಎಂಆರ್‌ಪಿಎಲ್‌ನ ಸೀತಾರಾಮ ರೈ ಚೆಲ್ಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಸತೀಶ್ ರೈ ಮಿಷನ್‌ಮೂಲೆ, ಆಳ್ವಾಸ್ ಫ್ರೊಪೆಸರ್ ಡಾ ಸುಧೀರ್ ಶೆಟ್ಟಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉದ್ಯಮಿ ಪ್ರಸನ್ನಕುಮಾರ್ ಶೆಟ್ಟಿ ಸಿಝ್ಲರ್, ಕ್ಯಕಾರ ಸರಕಾರಿ ಹಿ ಪ್ರಾ ಶಾಲೆ ಮುಖ್ಯಗುರು ರಾಮಣ್ಣ ರೈ ಕರ್ನೂರು, ನಿವೃತ್ತ ಮುಖ್ಯಗುರುನಾರಾಯಣ ನಾಯ್ಕ ಗುಮ್ಮಟಗದ್ದೆ, ಉದ್ಯಮಿ ಚಿದಾನಂದ ರೈ ಬರ‍್ನಹಿತ್ಲು, ಪ್ರೀತಂ ರೈ ಬೆಳ್ಲಾರೆ, ಆದರ್ಶ ಯು, ಗ್ರಾಪಂ ಸದಸ್ಯೆ ರೇಖಾ ಮೊದಲಾದವರು ಉಪಸ್ಥಿತರಿದ್ದರು. ಸರ್ವಶಕ್ತಿ ಯುವಕಮಂಡಲದ ಗೌರವಾಧ್ಯಕ್ಷ ಪ್ರಕಾಶ್‌ಚಂದ್ರ ರೈ ಕೈಕಾರ ಸ್ವಾಗತಿಸಿದರು. ಯುಕಮಂಡಲದ ಅಧ್ಯಕ್ಷ ಪ್ರಜನ್‌ರೈ ತೊಟ್ಲ ವಂದಿಸಿದರು. ಕಾರ್ಯದರ್ಶಿ ರವಿಕಿರಣ್ ಬಲ್ಲೇರಿ ವಂದಿಸಿದರು. ಸಂತೋಷ್‌ಕುಮಾರ್ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here