ಪುತ್ತೂರು: ನ.6ರಂದು ಹತ್ಯೆಗೊಳಗಾದ ಕಲ್ಲೇಗ ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಶೇವಿರೆ ಮನೆಗೆ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಬೆದರಿಕೆ ನೀಡಿದವರ ತನಿಖೆಗೆ ಇಲಾಖೆಗೆ ಸೂಚನೆ ಭರವಸೆ:
ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಅಕ್ಷಯ್ ಕಲ್ಲೇಗ ಅವರ ತಂದೆ ಚಂದ್ರಶೇಖರ್ ಗೌಡ ಕಲ್ಲೇಗ ಮಾತನಾಡಿ, ಅಮಾಯಕ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಈ ನಡುವೆ ಹಲವು ಬೆದರಿಕೆ ನೀಡಿದವರ ಕುರಿತು ಸೂಕ್ತ ತನಿಖೆ ಮಾಡುವಂತೆ ವಿನಂತಿಸಿದರು. ಸಂಸದರು ಈ ಕುರಿತು ನಾನು ಇಲಾಖೆಗೆ ಸೂಚನೆ ನೀಡುತ್ತೇನೆಂದರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉದ್ಯಮಿ ಪದ್ಮಶ್ರೀ ಸೋಲಾರ್ ಸಿಸ್ಟಮ್ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಹರಿಪ್ರಸಾದ್ ಯಾದವ್, ಅರುಣ್ ವಿಟ್ಲ, ದಯಾನಂದ ಉಜ್ರುಪಾದೆ ಸಹಿತ ಹಲವಾರು ಮಂದಿ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು. ಕಲ್ಲೇಗ ಟೈಗರ್ಸ್ ನ ಪದಾಧಿಕಾರಿಗಳು ಸಹ ಈ ಸಂದರ್ಭ ಉಪಸ್ಥಿತರಿದ್ದರು. ಸುಳ್ಯದ ನ್ಯಾಯವಾದಿ ವೆಂಕಪ್ಪ ಗೌಡ ಅವರು ಇದೇ ಸಂದರ್ಭ ಅಲ್ಲಿಗೆ ಆಗಮಿಸಿ ಚಂದ್ರಶೇಖರ್ ಗೌಡ ಅವರಲ್ಲಿ ಮಾತನಾಡಿದರು.