ಪುತ್ತೂರು:ಹಲವು ವರ್ಷಗಳ ಕಾಲ ಪುತ್ತೂರು ಬಸ್ ನಿಲ್ದಾಣದ ಬಳಿ ಉದ್ಯಮ ನಡೆಸಿಕೊಂಡಿದ್ದ ದಿ.ಯೆಳ್ತಿಮಾರ್ ಸುಬ್ರಾಯ ಶೆಣೈ ಅವರ ಪತ್ನಿ ವೈ.ಸರಸ್ವತಿ ಶೆಣೈ(70ವ.)ರವರು ನ.15ರಂದು ಸ್ವಗೃಹ ಜಿಡೆಕಲ್ಲಿನ `ಪದ್ಮಾವತಿ ನಿಲಯ’ದಲ್ಲಿ ನಿಧನರಾದರು.
ಮೃತರು ಪುತ್ರ, ಬಸ್ ನಿಲ್ದಾಣದ ಬಳಿಯ ಸರಸ್ವತಿ ಬುಕ್ಸ್ ಮಾಲಕ ದಾಮೋದರ ವಿನಾಯಕ ಶೆಣೈ, ಮಗಳು ವೈ.ಧನಲಕ್ಷ್ಮೀ, ಅಳಿಯ ಆದಿತ್ಯ ಬಾಳಿಗ ಹಾಗೂ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ.ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.