ಕಾಣಿಯೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಸ.ಕಿ.ಪ್ರಾ ಶಾಲೆ ಕೊಪ್ಪ ಇದರ ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆಯು ನ 18ರಂದು ಕೊಪ್ಪ ಸ. ಹಿ. ಪ್ರಾ. ಶಾಲಾ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಣಿಯೂರು ಗ್ರಾ. ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ ವಹಿಸಲಿದ್ದು, ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳ ದಿನಾಚರಣೆಯ ವೈಶಿಷ್ಟ್ಯತೆ ವಿಷಯಾಧಾರಿತ ಸೃಜನಶೀಲ ಕಲಿಕಾ ಪುಸ್ತಕ ಕಿರಿಯ ಪ್ರಾಥಮಿಕ ವಿಭಾಗ ಸಂಪುಟ 1ರ ಬಿಡುಗಡೆ – ಫಲಶೃತಿ ಅನಾವರಣ, ಚಿನ್ನರ ಕಲರವ ಬಹುಮಾನ ವಿತರಣೆ ನಡೆಯಲಿದೆ ಎಂದು ಶಾಲಾ ಮುಖ್ಯಗುರು ನಾರಾಯಣ್ ಪುಣಚ ತಿಳಿಸಿದ್ದಾರೆ.