ಗೀತಾಭಿಯಾನ ಸ್ಪರ್ಧೆ- ವಿವೇಕಾನಂದ ಆ.ಮಾ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ಮಂಗಳೂರು ಸಂಸ್ಕೃತ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಸಂಯುಕ್ತ ಆಶ್ರಯದಲ್ಲಿ ನರಿಮೊಗರು ಸರಸ್ವತೀ ವಿದ್ಯಾಕೇಂದ್ರದಲ್ಲಿ ಗೀತಾಭಿಯಾನದ ಅಂಗವಾಗಿ ನಡೆದ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವೈಷ್ಣವಿ ಪೈ ( ನಾಗೇಶ ಪೈ ಮತ್ತು ಸಹನಾ ಪೈ ದಂಪತಿಗಳ ಪುತ್ರಿ) ಪ್ರಥಮ ಸ್ಥಾನ ಹಾಗೂ 10ನೇತರಗತಿಯ ತನ್ಮಯಿ ವಾಗ್ಲೆ ( ಸತೀಶ್ ವಾಗ್ಲೆ ಮತ್ತು ಪೂರ್ಣಿಮಾ ವಾಗ್ಲೆ ದಂಪತಿಗಳ ಪುತ್ರಿ) ದ್ವಿತೀಯ ಸ್ಥಾನ ಗಳಿಸಿ ಧರ್ಮಸ್ಥಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಗೀತಾಭಿಯಾನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here