ಜ್ಞಾನದ ವೃದ್ಧಿಗೆ ಗ್ರಂಥಾಲಯ ಕಾಮಧೇನುವಿದ್ದಂತೆ
ಪುತ್ತೂರು: ಬೆಟ್ಟಂಪಾಡಿ ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಬೆಟ್ಟಂಪಾಡಿ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು. ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ವೆಂಕಟ್ರಮಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಕಾರದ ನಿರ್ದೇಶನದಂತೆ ಏಳು ದಿನಗಳ ಅವಧಿಯನ್ನು ಗ್ರಂಥಾಲಯ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ. ನಾವು ಇಂದು ಆರ್ಥಿಕ ಸ್ಥಿತಿ ಮಾತ್ರ ನೋಡುತ್ತೇವೆ. ಜ್ಞಾನದ ಕಡೆಗೆ ನೋಡುವುದಿಲ್ಲ. ಜ್ಞಾನದ ವೃದ್ಧಿಗೆ ಗ್ರಂಥಾಲಯ ಕಾಮಧೇನುವಿದ್ದಂತೆ. ಕಲೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಇಲ್ಲದವ ಪ್ರಾಣಿಯ ಹಾಗೆ. ಮನುಷ್ಯ ಶಾಂತಿ, ನೆಮ್ಮದಿಯಿಂದ ಇರಬೇಕಾದರೆ ಗ್ರಂಥಾಲಯದ ಅವಶ್ಯಕತೆ ಇದೆ ಎಂದರು. ಉದ್ಯೋಗ ಖಾತರಿ ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕ ವಿನೋದ್ ಮಾಹಿತಿ ನೀಡಿದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಚಂದ್ರಶೇಖರ ರೈ ಬಾಳ್ಯೊಟ್ಟು, ಗಂಗಾಧರ ಗೌಡ ಮಿತ್ತಡ್ಕ, ಮೊಯಿದು ಕುಂಞಿ ಕೋನಡ್ಕ, ಉಮಾವತಿ ಸುಬಬ್ಪ್ಪ ಮಣಿಯಾಣಿ, ಪವಿತ್ರ ಡಿ, ಲಲಿತಾ, ಬೇಬಿ, ವೇದಿಕಡಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗ ವಿವಿಧ ಸ್ಪರ್ಧೆ ನಡೆಯಿತು. ಬೆಟ್ಟಂಪಾಡಿ ಗ್ರಾಮ ಪಂಚಾತ್ ಕಾರ್ಯದರ್ಶಿ ಬಾಬು ನಾಯ್ಕ, ಸಿಬಂದಿ ಸಂದೀಪ್ ಮಣಿಯಾಣಿ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ, ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಲತಾ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೌಮ್ಯ ಎಂ.ಎಸ್. ಸ್ವಾಗತಿಸಿ ವಂದಿಸಿದರು. ಬೆಟ್ಟಂಪಾಡಿ ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತ ಸಹಕರಿಸಿದರು.