ಸರಕಾರ ಸ್ಪಂದಿಸದಿದ್ದರೆ ಖಾಸಗಿ ಬಸ್ ವ್ಯವಸ್ಥೆ ಪತನ: ದ.ಕ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ

0

ಮಂಗಳೂರು: ದೇಶಕ್ಕೆ ಮೊದಲ ಇದ್ದಿಲ ಬಸ್ಸು ಸೇವೆಯನ್ನುನೀಡಿದ ಗರಿಮೆ, 110 ವರ್ಷಗಳ ಇತಿಹಾಸವನ್ನು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ಸು ಸೇವಾ ವ್ಯವಸ್ಥೆಯು ಪ್ರಸ್ತುತ ನಷ್ಟದ ಅಂಚಿನಲ್ಲಿದ್ದು, ತೆರಿಗೆಯಲ್ಲಿ ರಿಯಾಯಿತಿ, ಸಬ್ಸಿಡಿಯ ಮೂಲಕ ಸರಕಾರ ಪೂರಕವಾಗಿ ಸ್ಪಂದಿಸದಿದ್ದರೆ ಈ ವ್ಯವಸ್ಥೆ ಪತನಗೊಳ್ಳಲಿದೆ ಎಂಬ ಆತಂಕವನ್ನು ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ವ್ಯಕ್ತಪಡಿಸಿದೆ.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ದ.ಕ. ಜಿಲ್ಲಾ ಸಿಟಿ ಬಸ್ಸು ಮಾಲಕರ ಸಂಘದ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಸರಕಾರದಿಂದ ನೀಡಲಾಗುವ ತೆರಿಗೆ ವಿನಾಯಿತಿ ಖಾಸಗಿ ಬಸ್ಸುಗಳಿಗೆ ಲಭ್ಯವಾಗುತ್ತಿಲ್ಲ. 50 ಪ್ರಯಾಣಿಕರನ್ನು ಸಾಗಿಸುವ ಖಾಸಗಿ ಬಸ್ಸು ಮೂರು ತಿಂಗಳಿ ಗೊಮ್ಮೆ 50000 ಪಾವತಿಸಬೇಕಾಗುತ್ತದೆ. ರೂ. ಮುಂಗಡ ಇದು ಬಸ್ಸು ಹೊರೆಯಾಗುತ್ತಿದೆ ಎಂದು ಅವರು ಹೇಳಿದರು. ತೆರಿಗೆ ಮಾಲಕರಿಗೆರಾಜ್ಯ ಸರಕಾರವು ಯಶಸ್ವಿನಿ, ಆಯುಷ್ಮಾನ್ ಕಾರ್ಡ್ ಯೋಜನೆಯ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಿಗೂ ಒದಗಿಸು ತ್ತದೆ. ಆದರೆ ಕೆಎಸ್‌ಆರ್‌ಟಿಸಿಗೆ ಬಸ್ಸುಗಳಿಗೆ ಒದಗಿಸುವ ಸೌಲಭ್ಯ ಖಾಸಗಿ ಬಸ್ಸುಗಳಿಗೆ ಯಾಕಿಲ್ಲ ಎಂದವರು ಪ್ರಶ್ನಿಸಿದರು.

1981ರಲ್ಲಿ ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಂದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆಯೂ ಜಾರಿಯಲ್ಲಿದೆ. ಈವರೆಗೆ 7 ಲಕ್ಷ ವಿದ್ಯಾರ್ಥಿಗಳಿಗೆ 19 ಕೋಟಿ ರೂ.ಗಳಿಗೂ ಅಧಿಕ ಕೊಡುಗೆಯನ್ನು ನೀಡಿದ್ದು, ಮುಂದುವರಿಯುತ್ತಿದೆ. ಆದರೆ ಸರಕಾರದಿಂದ ಯಾವುದೇ ರೀತಿಯ ರಿಯಾಯಿತಿ, ಸಬ್ಸಿಡಿ ಖಾಸಗಿ ಬಸ್ಸುಗಳಿಗೆ ದೊರಕುತ್ತಿಲ್ಲ ಎಂದವರು ಹೇಳಿದರು.ಕೊರೋನಾ ಸಮಯದಲ್ಲಿ 2 ತಿಂಗಳ ತೆರಿಗೆ ರಿಯಾಯಿತಿ ಬಿಟ್ಟರೆ ಬೇರೇನೂ ದೊರಕಿಲ್ಲ. ಆದರೆ ಕೆಎಸ್‌ಆರ್‌ಟಿಸಿಗೆ 3400 ಕೋಟಿ ರೂ. ವೇತನಕ್ಕಾಗಿ ನೀಡಲಾಗಿದೆ. ನಾವೂ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಉತ್ತಮ ಸೇವೆ ನೀಡುತ್ತಿದ್ದರೂ ಸರಕಾರಿ ಸಾರಿಗೆ ವ್ಯವಸ್ಥೆಗಿರುವ ಸವಲತ್ತು ನಮಗೆ ಸಿಗುತ್ತಿಲ್ಲ. ಈ ನಡುವೆ, ಖಾಸಗಿ ಬಸ್ ವ್ಯವಸ್ಥೆ ಉತ್ತಮವಾಗಿರುವಲ್ಲಿ ಸರಕಾರಿ ಬಸ್ಸುಗಳನ್ನು ಹಾಕುವ ಮೂಲಕ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತಿದೆ. ವಿಪರೀತ ಯೋಜನೆ, ಶಕ್ತಿ ಯೋಜನೆ, ಅವೈಜ್ಞಾನಿಕ ಸ್ಪರ್ಧೆ, ಡೀಸೆಲ್ ಬೆಲೆ ಏರಿಕೆಯಿಂದಾಗಿ ಲಕ್ಷಗಟ್ಟಲೆ ಸಾಲ ಮಾಡಿ ಬಸ್ಸು ಖರೀದಿಸಿರುವ ಮಾಲಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸು ಹಾಕುವುದು ಅಥವಾ ಶಕ್ತಿಯಂತಹ ಸರಕಾರದ ಯೋಜನೆಗಳ ಬಗ್ಗೆ ನಮ್ಮ ವಿರೋಧವಿಲ್ಲ. ದುರ್ಗಮ ಪ್ರದೇಶಗಳಿಗೆ, ಇನ್ನೂ ಬಸ್‌ಗಳೇ ತಲುಪದ ಪ್ರದೇಶಗಳಿಗೆ ಬಸ್ಸುಗಳನ್ನು ಹಾಕಲಿ. ಆದರೆ ನಿಮಿಷಕ್ಕೊಂದು ಬಸ್ಸು ಹೊಂದಿರುವ ಪ್ರದೇಶಗಳಿಗೆ ಸರಕಾರಿ ಬಸ್ಸುಗಳನ್ನು ಹಾಕುವುದರ ಬಗ್ಗೆ ಸರಕಾರ ಗಮನ ಹರಿಸಬೇಕು. ಕರಾವಳಿಯಲ್ಲಿ 2 ಸಾವಿರ ಖಾಸಗಿ ಬಸ್ಸುಗಳಿವೆ. ಖಾಸಗಿ ಬಸ್ ವ್ಯವಸ್ಥೆ ಸ್ಥಗಿತಗೊಂಡರೆ ಈ ವ್ಯವಸ್ಥೆಯಡಿ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಬೀದಿ ಪಾಲಾಗಲಿವೆ. 1988ರಲ್ಲಿ ಮುಕ್ತ ಪರವಾನಿಗೆ ನೀತಿಯಿಂದ ಉಚಿತ ಪರ್ಮಿಟ್ ಜಾರಿಗೆ ಬಂತು. ಕೆಎಸ್‌ಆರ್‌ಟಿಸಿಯಿಂದ ಪರ್ಯಾಯ ಬಸ್ಸುಗಳನ್ನು ಹಾಕುವಾಗ ಮಾನದಂಡಗಳನ್ನು ಪಾಲಿಸದ ಕಾರಣ ಖಾಸಗಿ ಬಸ್ಸುಗಳ ಬಸ್ಸುಗಳವರು ನಷ್ಟ ಎದುರಿಸಬೇಕಾಗಿದೆ ಎಂದು ಅಝೀಝ್ ಪರ್ತಿಪ್ಪಾಡಿ ಖಾಸಗಿ ಬಸ್ಸು ಮಾಲಕರ ಸಮಸ್ಯೆಗಳನ್ನು ವಿವರಿಸಿದರು.

ಸಮಯ ಪರಿಪಾಲನೆ ಜಾರಿಯಾದ ಬಳಿಕ ಬಸ್ಸುಗಳ ಅಪಘಾತಗಳು ನಿಯಂತ್ರಣವಾಗಿವೆ. ನಮ್ಮ ಚಾಲಕ, ನಿರ್ವಾಹಕರ ಸಮಸ್ಯೆಗಳಿಗೆ ಸಂಬಂಧಿಸಿ ತರಬೇತಿ ನಡೆಸಲಾಗುತ್ತಿದೆ. ಈ ನಡುವೆ ನಗರದಲ್ಲಿ ವಿವಿಧ ಇಲಾಖೆಗಳ ಮೂಲಕ ಹೊಂದಾ ಣಿಕೆ ಇಲ್ಲದೆ ತಿಂಗಳುಗಟ್ಟಲೆ ರಸ್ತೆ ಕಾಮಗಾರಿಗಳು ನಡೆಯುತ್ತಿರುವ ಕಾರಣ ಸುಗಮ ಸಂಚಾರಕ್ಕೆ ಬಸ್ ಚಾಲಕ, ನಿರ್ವಾಹಕರು ಹರಸಾಹಸ ಪಡುವಂತಾಗಿದೆ ಎಂದು ಅವರು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ದಿಲ್‌ರಾಜ್ ಆಳ್ವ ಪ್ರತಿಕ್ರಿಯಿಸಿ, ಮಾದರಿ ಸಾರಿಗೆ ವ್ಯವಸ್ಥೆ ದ.ಕ. ಜಿಲ್ಲೆಯಲ್ಲಿದ್ದು, ವಿಶ್ವ ಬ್ಯಾಂಕ್ ನವರು ಸಂಘಟಿತ ಬಸ್ಸು ವ್ಯವಸ್ಥೆಯ ಬಗ್ಗೆ ಅಧ್ಯಯನಕ್ಕಾಗಿ ನಮ್ಮಲ್ಲಿ ಮಾತುಕತೆಯನ್ನೂ ನಡೆಸಿದ್ದರು. ಆದರೆ ಕೋವಿಡ್ ಕಾರಣದಿಂದ ಅದು ಆಗಲಿಲ್ಲ. ನಮ್ಮಲ್ಲಿ 350 ಸಿಟಿ ಹಾಗೂ 1500ರಷ್ಟು ಸರ್ವಿಸ್ ಬಸ್‌ಗಳಿವೆ. 80ರ ದಶಕದ ಟೈಮಿಂಗ್ ವ್ಯವಸ್ಥೆಯನ್ನೇ ಈಗಲೂ ಪಾಲಿಸಲಾಗುತ್ತಿದೆ. ದೇಶದ ಪ್ರಥಮ ಪ್ರಯೋಗವಾಗಿ ಚಲೋ ಆ್ಯಪ್ ನೀಡಿದ ಹೆಮ್ಮೆ ನಮ್ಮದು. ಸಾರಿಗೆ ಸಮಯದ ವಿಷಯದಲ್ಲಿ ಅಧ್ಯಯನದ ಅಗತ್ಯವಿದೆ ಎಂದು ಹೇಳಿದರು.ಖಾಸಗಿ ಬಸ್ಸುಗಳು ಶಿಸ್ತುಬದ್ಧ ಟೈಮಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಈ ಅವಧಿಗೆ ಕೆಎಸ್‌ಆರ್‌ಟಿಸಿ ಬಸ್ಸು ಗಳನ್ನು ಹಾಕಿದಾಗ ಪೈಪೋಟಿಗೆ ಕಾರಣವಾಗುತ್ತದೆ. ಹಾಗಾಗಿ ರೇಶನಲೈಸ್ಟ್ ಟೈಮಿಂಗ್ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಈ ಬಗ್ಗೆ ಅಧ್ಯಯನ ಆದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ದಿಲ್‌ರಾಜ್ ಆಳ್ವ ಹೇಳಿದರು.

ಕೆಲವೊಂದು ರೂಟ್‌ನಲ್ಲಿ ಚಲೋಕಾರ್ಡ್ ಸ್ವೀಕರಿಸಲು ಮಿಶನ್ ಇಲ್ಲ ಎಂಬ ಸಬೂಬು ಹೇಳಿ ನಿರಾಕರಿಸುತ್ತಾರೆ. ಪ್ರಶ್ನಿಸಿದರೆ ನಿರ್ವಾಹಕರು ನಿಂದಿಸುತ್ತಾರೆ ಎಂದು ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದಾಗ, ಅಂತಹ ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು.  ಈ ಬಗ್ಗೆ ತಕ್ಷಣ ಸಂಬಂಧಪಟ್ಟವರು ಸಹಾಯವಾಣಿ 7996999977ಗೆ ಕರೆ ಮಾಡಿ ದೂರು ನೀಡಬಹುದು ಎಂದು ಅಝೀಝ್ ಪರ್ತಿಪ್ಪಾಡಿ ತಿಳಿಸಿದರು.

ಸಂವಾದದಲ್ಲಿ ದ.ಕ.ಜಿಲ್ಲಾ ಖಾಸಗಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳಾದ ರಾಮಚಂದ್ರ ನಾಯ್ಕ ,ರಾಮಚಂದ್ರ ಪಿಲಾ‌ರ್, ರಾಜೇಶ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here