ಉಪ್ಪಿನಂಗಡಿ: ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಗೃಹ ರಕ್ಷಕದಳದ 61ನೇ ಉತ್ಥಾನನ ದಿನಾಚರಣೆಯಂದು ಉಪ್ಪಿನಂಗಡಿ ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರಿಗೆ ಡಿಜಿ ಡಿಜಿ ಪ್ರಶಂಸನೀಯ ಪತ್ರ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಪೊಲೀಸ್ ಮಹಾ ನಿರ್ದೇಶಕರು, ಗೃಹ ರಕ್ಷಕದಳದ ಮಹಾ ಸಮಾದೇಷ್ಠರಾದ ಕಮಲ್ ಪಂತ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಗೃಹರಕ್ಷಕದಳದ ಉಪ ಮಹಾ ಸಮಾದೇಷ್ಠರಾದ ವಿಕ್ರಂ ಎಂ. ಹಾಕೆ, ಅಗ್ನಿಶಾಮಕ ಇಲಾಖೆಯ ಡಿ.ಐ.ಜಿ. ರವಿ ಡಿ. ಚೆನ್ನಣ್ಣನವರ್ ಹಾಗೂ ಉನ್ನತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.