ಕಬಕ:ಸರಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ

0

ಕಬಕ:ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ.9ರಂದು ವಾರ್ಷಿಕ ಪ್ರತಿಭಾ ದಿನಾಚರಣೆ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಬಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೀತಾ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕಬಕ ಗ್ರಾಮ ಪಂಚಾಯತ್ ಸದಸ್ಯ ಉಮ್ಮರ್ ಫಾರೂಕ್, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಾಬಾ, ನಿವೃತ್ತ ಆಂಗ್ಲಭಾಷಾ ಉಪನ್ಯಾಸಕ ಚಂದ್ರಹಾಸ ರೈ ಬಿ, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮಲತಾ ಜೆ ರೈ, ಶಿಕ್ಷಣ ತಜ್ಞ ಶ್ರೀಶ ಭಟ್ ಬೈಪದವು,ಅಭಿವೃದ್ಧಿ ಸಮಿತಿ ಸದಸ್ಯರಾದ ಮಹಮ್ಮದ್ ಕಬಕಕರ‍್ಸ್,ಆದಂ ಕೆದುವಡ್ಕ,ಶ್ರೀಮತಿ ಪದ್ಮಾವತಿ, ಗುಲಾಬಿ ದೇವಸ್ಯ,ರಶೀದ್ ಮುರ, ಶಾಲಾ ನಾಯಕಿ ದುರ್ಗಾಶ್ರೀ,ಉಪನಾಯಕಿ ಖತೀಜತುಲ್ ಝಕಿಯಾ, ಕಾರ್ಯದರ್ಶಿ ಕೌಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ರಮ್ಲತ್ ಮತ್ತು ತಶ್ಮಿಯಾರವರಿಗೆ ಶಿವರಾಮ ಕಜೆ ಮತ್ತು ನಿವೃತ್ತ ಉಪನ್ಯಾಸಕ ವೆಂಕಟ್ರಮಣ ಭಟ್ ವಿ ಇವರ ದತ್ತಿನಿಧಿ ಬಹುಮಾನವನ್ನು ನೀಡಲಾಯಿತು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಹಮ್ಮದ್ ಕಬಕಕರ್ಸ್, ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ರಮ್ಲತ್ ಮತ್ತು ತಶ್ಮಿಯಾ ರವರಿಗೆ ತಲಾ ರೂ.1000 ನಗದು ಬಹುಮಾನ ನೀಡಿದರು.ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವನಿತಾ ಕೆ.ರವರು ಜೀವಶಾಸ್ತ್ರ ವಿಷಯದಲ್ಲಿ ಮತ್ತು ಸಂಸ್ಥೆಯಿಂದ ವರ್ಗಾವಣೆಗೊಂಡ ಶ್ರೀಮತಿ ವಿಜೇತಾ ವಿ.ಬಿ.ರವರು ರಸಾಯನಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕಗಳಿಸಿದ್ದಕ್ಕಾಗಿ ರಮ್ಲತ್‌ರವರಿಗೆ ನಗದು ಬಹುಮಾನ ನೀಡಿದರು.

ಕನ್ನಡ ಉಪನ್ಯಾಸಕರೂ ಆಗಿರುವ ಪ್ರಾಂಶುಪಾಲ ಶ್ರೀಧರ ರೈ ಕೆ.ರವರು 2022-23ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 98 ಅಂಕ ಪಡೆದ ತಶ್ಮಿಯಾ ಮತ್ತು ತೇಜಾಕ್ಷಿಣಿರವರಿಗೆ ನಗದು ಬಹುಮಾನ ನೀಡಿದರು.ಉಪನ್ಯಾಸಕರಾದ ಶ್ರೀಮತಿ ಶೋಭಾ,ಕವನ, ಶ್ರೀಮತಿ ಅಶ್ವಿತಾ,ಚಂದ್ರಿಕಾ, ಸ್ವಾತಿ, ಸುಶ್ಮಿತಾ, ಶ್ರೀಮತಿ ಉಷಾ, ಶ್ರೀಮತಿ ಮಮತಾ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು.ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇಂಡಿಯನ್ ಸ್ಟೀಲ್ ಮಾಲಕ ಟಿ.ಸುಬ್ರಮಣ್ಯ ಭಟ್‌ರವರನ್ನು ಸಂಸ್ಥೆಯ ವತಿಯಿಂದ ಶಾಲು,ಹಾರ,ಫಲಪುಷ್ಪ,ಸ್ಮರಣಿಕೆ ಪೇಟದೊಂದಿಗೆ ಸನ್ಮಾನಿಸಲಾಯಿತು.ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವನಿತಾ ಕೆ ಸ್ವಾಗತಿಸಿದರು.ಪ್ರಾಂಶುಪಾಲ ಶ್ರೀಧರ ರೈ ಕೆ ವರದಿ ವಾಚಿಸಿದರು.ಭೌತಶಾಸ್ತ್ರ ಉಪನ್ಯಾಸಕ ಶ್ರೀನಿವಾಸ ಬಡೆಕ್ಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರು.ಗಣಿತಶಾಸ್ತ್ರ ಉಪನ್ಯಾಸಕಿ ನಯನ ಕುಮಾರಿ ವಂದಿಸಿದರು.ಅಪರಾಹ್ನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here